Bengaluru 29°C
Ad

ರಷ್ಯಾದ ಚರ್ಚ್​ಗಳ ಮೇಲೆ ಭಯೋತ್ಪಾದಕ ದಾಳಿ; 15 ಮಂದಿ ಪೊಲೀಸರು ಸಾವು

Russia

ರಷ್ಯಾ: ರಷ್ಯಾದಲ್ಲಿ ಚರ್ಚ್​ಗಳು ಹಾಗೂ ಯಹೂದಿಗಳ ಪ್ರಾರ್ಥನಾ ಸ್ಥಳಗಳ ಮೇಲೆ ಉಗ್ರರ ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸ್​ ಪೋಸ್ಟ್​ ಮೇಲೂ ದಾಳಿ ನಡೆಸಿದ್ದು ಘಟನೆಯಲ್ಲಿ 15 ಮಂದಿ ಪೊಲೀಸರು ಪ್ರಾಣ ಕಳೆದುಕೊಂಡಿದ್ದಾರೆ.

ಚರ್ಚ್ ಮತ್ತು ಸಿನಗಾಗ್‌ಗೆ ಬಂದಿದ್ದ ಭಕ್ತರ ಮೇಲೆ ಬಂದೂಕುಧಾರಿಗಳು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ 15 ಪೊಲೀಸರು ಮತ್ತು ಚರ್ಚ್ ಪಾದ್ರಿ ಸಾವನ್ನಪ್ಪಿದ್ದಾರೆ ಮತ್ತು 13 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ನಾಲ್ಕು ತಿಂಗಳ ಅವಧಿಯಲ್ಲಿ ರಷ್ಯಾದಲ್ಲಿ ಸಾರ್ವಜನಿಕ ಸ್ಥಳದ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ. ಇದು ಉಗ್ರರ ದಾಳಿಯೇ ಎಂಬುದನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ. ಡರ್ಬೆಂಟ್ ಎಂಬ ನಗರದಲ್ಲಿ ಈ ದಾಳಿಗಳು ನಡೆದಿವೆ ಎಂದು ಕಾಕಸಸ್ ಪ್ರದೇಶದ ಆಂತರಿಕ ಸಚಿವಾಲಯ ತಿಳಿಸಿದೆ. ಈ ನಗರದಲ್ಲಿ ಯಹೂದಿಗಳ ಪ್ರಾಚೀನ ವಸಾಹತು ಇದೆ ಮತ್ತು ಈ ಸ್ಥಳವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

Ad
Ad
Nk Channel Final 21 09 2023
Ad