Ad

ಮನೆಯವರ ಕಣ್ಣೆದುರೇ ಭೂಕುಸಿತಕ್ಕೊಳಗಾಗಿ ಧಾರಾಶಾಹಿಯಾದ ಬಾವಿ: ದೃಶ್ಯ ವೈರಲ್

ನೋಡು ನೋಡುತ್ತಿದ್ದಂತೆ ಮನೆಯ ಬಾವಿಯೊಂದು ಭೂಕುಸಿತಕ್ಕೊಳಗಾದ ಘಟನೆ ಕಾರ್ಕಳ ತಾಲೂಕಿನ ನೆಲ್ಲಿಕಟ್ಟೆಯ ಸರ್ವಿಸ್ ಸ್ಟೇಶನ್ ಸಮೀಪ ನಡೆದಿದೆ.

ಉಡುಪಿ: ನೋಡು ನೋಡುತ್ತಿದ್ದಂತೆ ಮನೆಯ ಬಾವಿಯೊಂದು ಭೂಕುಸಿತಕ್ಕೊಳಗಾದ ಘಟನೆ ಕಾರ್ಕಳ ತಾಲೂಕಿನ ನೆಲ್ಲಿಕಟ್ಟೆಯ ಸರ್ವಿಸ್ ಸ್ಟೇಶನ್ ಸಮೀಪ ನಡೆದಿದೆ.

Ad
300x250 2

ಬಾವಿ ಕುಸಿಯುತ್ತಿರುವ ದೃಶ್ಯ ಇದೀಗ ಸಾಕಷ್ಟು ವೈರಲ್ ಆಗಿದೆ. ಮನೆಯಂಗಳದಲ್ಲೇ ಇದ್ದ ಬಾವಿ ಮನೆಯವರ ಕಣ್ಣೆದುರೇ ಭೂಕುಸಿತಕ್ಕೊಳಗಾಗಿ ಧಾರಾಶಾಹಿಯಾಗಿರುವ ಘಟನೆ ನಡೆದಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಭಾರೀ ಮಳೆಯಿಂದಾಗಿ ಭೂ ಕುಸಿತದ ಅಪಾಯ ಎದುರಾಗಿದೆ. ಇದೀಗ ಮನೆ ಕೂಡ ಅಪಾಯವನ್ನು ಎದುರಿಸುತ್ತಿದ್ದು, ಮನೆಯವರು ಆಂತಕಕ್ಕೀಡಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಭೂಕುಸಿತ ಉಂಟಾಗಿದೆ.

Ad
Ad
Nk Channel Final 21 09 2023
Ad