Bengaluru 22°C
Ad

ಜೋರಾಗಿ ಕೆಮ್ಮಿ ಎಲುಬು ಮುರಿದು ಹೋಗಲು ಕಾರಣವಂತೆ ನಿಜನಾ?

ಜೋರಾಗಿ ಕೆಮ್ಮಿ ಎಲುಬು ಮುರಿದುಕೊಂಡಿರುವ ಘಟನೆ ಚೀನಾದ ಫುಜಿಯಾನ್​ ಪ್ರಾಂತ್ಯದಲ್ಲಿ ಬೆಳಕಿಗೆ ಬಂದಿದೆ. 35 ವರ್ಷ ವಯಸ್ಸಿನ ವ್ಯಕ್ತಿ ಆಘಾತಕಾರಿ ಪ್ರಕರಣವನ್ನು ಹಂಚಿಕೊಂಡಿದ್ದಾರೆ. ಈ ಘಟನೆಯನ್ನು ತಿಳಿದ ವೈದ್ಯರೇ ಅಚ್ಚರಿಗೊಂಡಿದ್ದಾರೆ.

ಚೀನಾ: ಜೋರಾಗಿ ಕೆಮ್ಮಿ ಎಲುಬು ಮುರಿದುಕೊಂಡಿರುವ ಘಟನೆ ಚೀನಾದ ಫುಜಿಯಾನ್​ ಪ್ರಾಂತ್ಯದಲ್ಲಿ ಬೆಳಕಿಗೆ ಬಂದಿದೆ. 35 ವರ್ಷ ವಯಸ್ಸಿನ ವ್ಯಕ್ತಿ ಆಘಾತಕಾರಿ ಪ್ರಕರಣವನ್ನು ಹಂಚಿಕೊಂಡಿದ್ದಾರೆ. ಈ ಘಟನೆಯನ್ನು ತಿಳಿದ ವೈದ್ಯರೇ ಅಚ್ಚರಿಗೊಂಡಿದ್ದಾರೆ.

Ad
300x250 2

ವ್ಯಕ್ತಿ ಕೆಮ್ಮಿದಾಗ ದೇಹದ ತೊಡೆಯ ಭಾಗದ ಮೂಳೆ ಮುರಿದಿದೆ. ಬಳಿಕ ಆತನಿಗೆ ನಡೆಯಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಕೊನೆಗೆ ಆಸ್ಪತ್ರೆಗೆ ಹೋಗಿ ವೈದ್ಯರನ್ನು ಭೇಟಿ ಮಾಡುತ್ತಾನೆ.

ವೈದ್ಯರು ವ್ಯಕ್ತಿಯ ಎಕ್ಸ್​ರೇ ತೆಗೆದಿದ್ದು, ಅದರಲ್ಲಿ ತೊಡೆ ಮುರಿದಿರುವುದು ಗೊತ್ತಾಗಿದೆ. ಆದರೆ ಹೊರಭಾಗದಲ್ಲಿ ಯಾವುದೇ ಗಾಯಗಳಾಗದೆ ಮೂಳೆ ಮುರಿದಿರುವುದನ್ನು ಕಂಡು ಅಚ್ಚರಿಗೊಂಡ ವೈದ್ಯರು ಆತನನ್ನು ವಿಚಾರಿಸಿದ್ದಾರೆ.

ವೈದ್ಯರು ವ್ಯಕ್ತಿಯ ಆರೋಗ್ಯ, ಜೀವನ ಶೈಲಿಯನ್ನು ತಿಳಿದುಕೊಂಡಿದ್ದಾರೆ. ಅದರಲ್ಲಿ ವ್ಯಕ್ತಿಯ ಮೂಳೆಯ ಸಾಂದ್ರತೆ 80 ವರ್ಷದ ವ್ಯಕ್ತಿಯಂತೆ ಕಂಡುಬಂದಿದೆ. ಕಳಪೆ ಆಹಾರ ಸೇವನೆ, ಜಂಕ್​ ಫುಡ್​ಗಳ ಸೇವನೆ, ವ್ಯಾಯಾಮದ ಕೊರತೆ ಇವು ಮೂಳೆಗಳನ್ನು ದುರ್ಬಲಗೊಳಿಸಿವೆ. ಇದೇ ಕಾರಣಕ್ಕೆ ವ್ಯಕ್ತಿಯ ಮೂಳೆ ಮುರಿದಿದೆ ಎಂಬ ಮಾಹಿತಿ ತಿಳಿದು ಬಂದಿದೆ.

Ad
Ad
Nk Channel Final 21 09 2023
Ad