Bengaluru 24°C
Ad

ಗಾಜಾದ ನಿರಾಶ್ರಿತ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್​ 

ಇಸ್ರೇಲ್​ ಗಾಜಾದ ಗಾಜಾದ ಅಲ್​-ಬುರೆಜಿ ಮತ್ತು ಅಲ್ ಮಘಾಝಿ ನಿರಾಶ್ರಿತರ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿದ್ದು, 19ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಗಾಜಾ: ಇಸ್ರೇಲ್​ ಗಾಜಾದ ಗಾಜಾದ ಅಲ್​-ಬುರೆಜಿ ಮತ್ತು ಅಲ್ ಮಘಾಝಿ ನಿರಾಶ್ರಿತರ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿದ್ದು, 19ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಈ ಪ್ರದೇಶದಲ್ಲಿರುವ ಕ್ಲಿನಿಕ್​ನ ಹೊರಭಾಗಕ್ಕೆ 4 ಶೆಲ್​ಗಳು ಬಂದು ಅಪ್ಪಳಿಸಿವೆ.

ರಫಾದಲ್ಲಿ ನಡೆಸುತ್ತಿರುವ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯವು ಇಸ್ರೇಲ್‌ಗೆ ಆದೇಶಿಸಿದ ಕೆಲವೇ ದಿನಗಳಲ್ಲಿ ಈ ದಾಳಿ ನಡೆದಿರುವುದು ವ್ಯಾಪಕ ಆಕ್ರೋಶಕ್ಕೆ ಒಳಗಾಗಿದೆ.

ಮೇ 29ರಂದು ದಾಳಿ ನಡೆಸಿತ್ತು ಇಸ್ರೇಲ್ ವಾಯು ದಾಳಿಗೆ ಗಾಜಾದ ರಫಾದಲ್ಲಿನ ನಿರಾಶ್ರಿತರ ಶಿಬಿರದಲ್ಲಿದ್ದ ಕನಿಷ್ಠ 45 ಮಂದಿ ಮೃತಪಟ್ಟಿದ್ದರು, ಕಳೆದ ತಿಂಗಳು ಈ ಘಟನೆ ವರದಿಯಾಗಿತ್ತು. ಇದರಲ್ಲಿ ಅನೇಕ ಮಕ್ಕಳೂ ಸೇರಿದ್ದಾರೆ.

ಟೆಲ್ ಅವಿವ್ ಪ್ರದೇಶದ ಮೇಲೆ ಹಮಾಸ್ ಉಗ್ರರು ರಾಕೆಟ್‌ಗಳ ದಾಳಿ ನಡೆಸಿದ ಬೆನ್ನಲ್ಲೇ ಭಾನುವಾರ ತಡರಾತ್ರಿ ರಫಾ ಮೇಲೆ ಇಸ್ರೇಲ್ ಭೀಕರ ದಾಳಿ ನಡೆಸಿತ್ತು.

ರಫಾದಲ್ಲಿ ಅಧಿಕ ಸಂಖ್ಯೆಯಲ್ಲಿ ನಿರಾಶ್ರಿತರಿದ್ದು, ಅವರಿಗೆ ಮೂಲ ಸೌಕರ್ಯಗಳು, ಮಾನವೀಯ ನೆರವುಗಳನ್ನು ಒದಗಿಸುವ ಸಲುವಾಗಿ ಅಲ್ಲಿನ ಕಾರ್ಯಾಚರಣೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಇಸ್ರೇಲ್‌ಗೆ ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯ ಸೂಚಿಸಿತ್ತು. ಆದರೆ ಇಸ್ರೇಲಿ ಪಡೆಗಳು ಇಲ್ಲಿನ ಆಕ್ರಮಣವನ್ನು ಮತ್ತಷ್ಟು ಹೆಚ್ಚಿಸಿದೆ.

ಹಮಾಸ್​ ಉಗ್ರರು ಅಕ್ಟೋಬರ್​ 7ರಂದು ಇಸ್ರೇಲ್​ನ ದಕ್ಷಿಣ ಭಾಗದಲ್ಲಿ ಸಾಳಿ ನಡೆಸಿ 1,200 ಮಂದಿಯನ್ನು ಹತ್ಯೆ ಮಾಡಿದ್ದರು. ಜತೆಗೆ 250ಕ್ಕೂ ಹೆಚ್ಚು ಮಂದಿಯನ್ನು ಅಪಹರಿಸಿದ್ದರು.

Ad
Ad
Nk Channel Final 21 09 2023
Ad