News Karnataka Kannada
Monday, May 06 2024
ಪಶ್ಚಿಮ ಬಂಗಾಳ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್‌ ಟ್ವಿಟರ್‌ ಖಾತೆ ಹ್ಯಾಕ್‌

Trinamool Congress Twitter account hacked in Kolkata
Photo Credit : News Kannada

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್ ಆಗಿದ್ದು, ಹ್ಯಾಂಡಲ್‌ನ ಚಿತ್ರ ಮತ್ತು ಲೋಗೋ ಬದಲಾಗಿದೆ. ಪಕ್ಷದ ರಾಷ್ಟ್ರೀಯ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ಡೆರೆಕ್ ಒಬ್ರಿಯಾನ್‌ ಅವರು ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ. ಹ್ಯಾಂಡಲ್ ಅನ್ನು ಅದರ ಮೂಲ ಸ್ವರೂಪಕ್ಕೆ ತರಲು ಟ್ವಿಟರ್ ಅಧಿಕಾರಿಗಳೊಂದಿಗೆ ಸಂವಹನ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಹ್ಯಾಕ್ ಮಾಡಿದ ಹ್ಯಾಂಡಲ್‌ನಲ್ಲಿ ಹೆಸರನ್ನು “ಯುಗಾ ಲ್ಯಾಬ್ಸ್” ಎಂದು ಬದಲಾಯಿಸಲಾಗಿದೆ ಮತ್ತು ಮೂಲ ಪಕ್ಷದ ಲೋಗೋವನ್ನು “Y” ಮತ್ತು “L” ಅಕ್ಷರಗಳನ್ನು ಸಂಯೋಜಿಸುವ ಸಾಂಕೇತಿಕ ಚಿತ್ರದಿಂದ ಬದಲಾಯಿಸಲಾಗಿದೆ.

ಆದಾಗ್ಯೂ, “ಬ್ಲೂ ಟಿಕ್” ಇನ್ನೂ ಇದೆ. ಮಂಗಳವಾರ ಮುಂಜಾನೆ ಈ ವಿಷಯ ಮುಖಂಡರ ಗಮನಕ್ಕೆ ಬಂದಿದ್ದು, ಸೋಮವಾರ ತಡರಾತ್ರಿ ಹ್ಯಾಕಿಂಗ್ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಬಗ್ಗೆ “ಟ್ವಿಟ್ಟರ್ ಅಧಿಕಾರಿಗಳು ಸಂಪರ್ಕಿಸಲಾಗಿದ್ದು, ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್‌ಗೆ ಮೂಲ ನೋಟವನ್ನು ಶೀಘ್ರವಾಗಿ ಹಿಂದಿರುಗಿಸಲಾಗುವುದು ಎಂದು ಟ್ವಿಟರ್‌ ಸಂಸ್ಥೆ ಭರವಸೆ ನೀಡಿದೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು