ವಾರಣಾಸಿ: ಮಳೆಯ ರಭಸಕ್ಕೆ ಕರೆಂಟ್ ವೈಯರ್ ನೀರಿಗೆ ಬಿದ್ದ ಪರಿಣಾಮ, ಪುಟ್ಟ ಮಗುವಿಗೆ ವಿದ್ಯುತ್ ಸ್ಪರ್ಶವಾಗಿದೆ. ಉತ್ತರ ಪ್ರದೇಶದ ವಾರಣಾಸಿಯ ಚೆಟ್ಗಂಜ್ನಲ್ಲಿ ಈ ಘಟನೆ ನಡೆದಿದೆ.
ಮಳೆಯಿಂದಾಗಿ ವಿದ್ಯುತ್ ವೈರ್ವೊಂದು ಕಟ್ ಆಗಿ ನೀರು ತುಂಬಿದ ರಸ್ತೆ ಮೇಲೆ ಬಿದ್ದಿದೆ. ಇದೇ ವೇಳೆ, ರಸ್ತೆಯಲ್ಲಿ ಕಾಲು ಜಾರಿ ಬಿದ್ದ 4 ವರ್ಷ ಪುಟ್ಟ ಮಗುವಿಗೆ ವೈಯರ್ ತಗುಲಿ ವಿದ್ಯುತ್ ಪ್ರವಹಿಸಿದೆ. ಒಂದು ನಿಮಿಷಕ್ಕೂ ಹೆಚ್ಚು ಕಾಲ ವಿದ್ಯುತ್ ಪ್ರವಹಿಸಿದ ನೀರಿನಲ್ಲಿ ಮಗು ಹೆಣಗಾಡಿತು. ಇದನ್ನರಿತ ವೃದ್ಧರೊಬ್ಬರು ಮಗುವುನ್ನು ಕಾಪಾಡೋಕೆ ಮುಂದಾಗಿದ್ದು, ಕೋಲಿನ ಮೂಲಕ ಮಗುವನ್ನು ರಕ್ಷಣೆ ಮಾಡಿದ್ದಾರೆ. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ.
ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಜ್ಜನ ಈ ಜಾಣ್ಮೆಗೆ ನೆಟ್ಟಿಗರು ಸಲಾಂ ಎಂದಿದ್ದಾರೆ.
#वाराणसी सिस्टम पर सवाल खड़ा करते वीडियो हुआ वायरल,सड़क पर भरे पानी में उतरा करंट,चपेट में आया 4 वर्षीय बालक,बीच सड़क पर तड़पता रहा बच्चा, देखते रहे राहगीर,बच्चे को बचाने के लिए बुजुर्ग ने उठाई जहमत,चेतगंज थाना क्षेत्र के हबीबपुरा का मामला pic.twitter.com/nW0eZJBhqm
— ठाkur Ankit Singh (@liveankitknp) September 26, 2023