ಬೀದರ್: ಪ್ರಯಾಣಿಕರ ಸುರಕ್ಷತೆಯ ದ್ರಷ್ಟಿಯಿಂದ ಭಾಲ್ಕಿ ಬಸ್ ಡಿಪೋ ಗೆ 6 ಹೊಸ ಬಸ್ ಗಳನ್ನೂ ಸೇರಿಸಲಾಗಿದ್ದು ಭಾಲ್ಕಿಯಿಂದ ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದ್ದು ಪ್ರಯಾಣಿಕರಿಗೆ ಅನುಕೂಲವಾಗಲೆಂದು 6 ಹೊಸ ಬಸ್ ಗಳಿಗೆ ಭಾಲ್ಕಿ ಬಸ್ ನಿಲ್ದಾಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಚಾಲನೆ ನೀಡಿದರು.
ಭಾಲ್ಕಿಯಿಂದ ಬೆಂಗಳೂರಿಗೆ ನಿತ್ಯ 2 ಹೊಸ ಸ್ಲೀಪರ್ ಬಸ್ ಪ್ರಯಾಣಿಸಲಿದ್ದು ಸಾರ್ವಜನಿಕರು, ವಿದ್ಯಾರ್ಥಿಗಳು, ವ್ಯಾಪಾರಸ್ಥರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಕೋರಿದರು.