News Karnataka Kannada
Sunday, April 21 2024
Cricket
ದೇಶ

ಭರ್ಜರಿ ಸುದ್ದಿ: ಕೇವಲ 999 ರೂ.ಗಳಿಗೆ 4ಜಿ ಫೋನ್‌ ಬಿಡುಗಡೆ ಮಾಡಿದ ಜಿಯೋ

Jio launches 4G phone
Photo Credit : News Kannada

ನವದೆಹಲಿ: ರಿಲಯನ್ಸ್ ಜಿಯೋ ಸೋಮವಾರ ಅತ್ಯಂತ ಕೈಗೆಟುಕುವ ದರದಲ್ಲಿ 4G ಫೋನ್ (ಜಿಯೋ ಭಾರತ್‌ ವಿ 2) ‘Jio Bharat V2’ ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ಕೇವಲ 999 ರೂ. ಆಗಿದೆ. ಮೊಬೈಲ್‌ ಫೋನ್‌ ಬಿಡುಗಡೆ ವೇಳೆ ಮಾತನಾಡಿದ ರಿಲಯನ್ಸ್‌ ಜಿಯೋ ಅಧ್ಯಕ್ಷ ಆಕಾಶ್‌ ಅಂಬಾನಿ, ಭಾರತದಲ್ಲಿ 250 ಮಿಲಿಯನ್‌ ಮೊಬೈಲ್ ಫೋನ್ ಬಳಕೆದಾರರು 2G ಯುಗದಲ್ಲಿಯೇ ಉಳಿದಿದ್ದಾರೆ.

ಜಗತ್ತು 5G ಕ್ರಾಂತಿಯಲ್ಲಿ ತೇಲುತ್ತಿರುವ ಸಮಯದಲ್ಲಿ ಇಂಟರ್ನೆಟ್‌ನಂತಹ ಮೂಲಸೌಲಭ್ಯಗಳಿಂದ ಜನರು ವಂಚಿತರಾಗಬಾರದು ಎಂಬ ಉದ್ದೇಶದಿಂದ ಕಂಪನಿ ಇಂತಹ ಫೋನ್‌ ಹೊರತಂದಿದೆ ಎಂದು ಹೇಳಿದ್ದಾರೆ. ತಂತ್ರಜ್ಞಾನದ ಪ್ರಯೋಜನವನ್ನು ದೇಶದ ಪ್ರತಿ ಜನತೆ ಬಳಸಿಕೊಳ್ಳಬೇಕು ಎಂಬುದು ನಮ್ಮ ಉದ್ದೇಶ. ಹಿಂದಿನಂತೆ ತಂತ್ರಜ್ಞಾನ ಕೇವಲ ಉಳ್ಳವರ ಸೊತ್ತಾಗಿ ಕೆಲವೇ ವರ್ಗಕ್ಕೆ ಸೀಮಿತವಾಗಿರುವುದಿಲ್ಲ ಎಂದು ಹೇಳಿದ್ದಾರೆ. ಮೊಬೈಲ್‌ ವೈಶಿಷ್ಟ್ಯತೆ: 999 ರೂಗಳಿಗೆ ಮೊಬೈಲ್‌ ದೊರೆಯಲಿದ್ದು, ತಿಂಗಳಿಗೆ 123 ರೂ. ರೀಚಾರ್ಜ್‌ ಮಾಡಿದರೇ ಅನಿಯಮಿತ ಧ್ವನಿ ಕರೆ ಸೌಲಭ್ಯ ಮತ್ತು 14 ಜಿಬಿ ಡಾಟಾ ದೊರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ..

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು