News Karnataka Kannada
Monday, May 13 2024
ಬೆಂಗಳೂರು

ಸ್ಟಾರ್ಟ್ ಅಪ್ ಸಂಖ್ಯೆಯಲ್ಲಿ ಭಾರತಕ್ಕೆ ವಿಶ್ವದಲ್ಲೇ ನಾಲ್ಕನೇ ಸ್ಥಾನ

India ranks fourth in the world in the number of start-ups
Photo Credit : News Kannada

ಬೆಂಗಳೂರು: ಭಾರತ ನವೋದ್ಯಮಗಳ ( ಸ್ಟಾರ್ಟ್ ಅಪ್) ಮೂಲಕ ಈಗ ಜಗತ್ತಿನ ಗಮನ ಸೆಳೆಯುತ್ತಿದೆ. ಈ ನಡುವೆ ಸ್ಟಾರ್ಟ್ ಅಪ್ ಗಳ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿದೆ ಎಂದು ವರದಿಯೊಂದು ತಿಳಿಸಿದೆ.

ಸ್ಟಾರ್ಟ್ಅಪ್ ಜಿನೋಮಿ ಸ್ಕೇಲ್ ಅಪ್ ವರದಿಯ ಮೊದಲ ಆವೃತ್ತಿಯಲ್ಲಿ ವಿಶ್ವದಲ್ಲಿ ಅತೀಹೆಚ್ಚು ಸ್ಟಾರ್ಟ್ ಅಪ್ ಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿ ನೀಡಲಾಗಿದ್ದು, ಇದರಲ್ಲಿ ಭಾರತ 4ನೇ ಸ್ಥಾನದಲ್ಲಿದೆ. ಭಾರತದ ಸ್ಟಾರ್ಟ್ ಅಪ್ ಗಳು 50 ಮಿಲಿಯನ್ ಡಾಲರ್ ವೆಂಚರ್ ಕ್ಯಾಪಿಟಲ್ (ವಿಸಿ) ಹೂಡಿಕೆ ಪಡೆದಿವೆ ಎಂದು ವರದಿ ತಿಳಿಸಿದೆ.

ಅಮೆರಿಕ, ಚೀನಾ ಹಾಗೂ ಇಂಗ್ಲೆಂಡ್ ಈ ಪಟ್ಟಿಯಲ್ಲಿ ಭಾರತಕ್ಕಿಂತ ಮುಂದಿವೆ. ಆದರೆ, ಒಟ್ಟು ವೆಂಚರ್ ಕ್ಯಾಪಿಟಲ್ ಹೂಡಿಕೆಯಲ್ಲಿ ಭಾರತ ಇಂಗ್ಲೆಂಡ್ ಗಿಂತ ಮುಂದಿದೆ. ಹಾಗೆಯೇ ಒಟ್ಟು ಟೆಕ್ ವ್ಯಾಲ್ಯೂ ಹೂಡಿಕೆಯಲ್ಲಿ ಕೂಡ ಇದು ಮುಂದಿದೆ. ಭಾರತದ 429 ಸ್ಟಾರ್ಟ್ ಅಪ್ ಗಳು 127 ಬಿಲಿಯನ್ ಡಾಲರ್ ವಿಸಿ ಹೂಡಿಕೆ ಜೊತೆಗೆ ಒಟ್ಟು 446 ಬಿಲಿಯನ್ ಡಾಲರ್ ಮೌಲ್ಯದ ಟೆಕ್ ಹೂಡಿಕೆಯನ್ನು ಕೂಡ ಪಡೆದಿವೆ.

ಈ ವರದಿಯು ಸ್ಟಾರ್ಟ್ ಅಪ್ ಗಳ ಯಶಸ್ವಿನ ವಿಚಾರವಾಗಿ ನಡೆದ ವರದಿಯನ್ನು ಒಳಗೊಂಡಿದೆ. ಯಾವ ವರ್ತನೆಗಳು, ಸಂಪನ್ಮೂಲಗಳು ಹಾಗೂ ಗುಣಲಕ್ಷಣಗಳು ಸ್ಟಾರ್ಟ್ ಅಪ್ ಗಳನ್ನು ವಿಭಿನ್ನವಾಗಿರಿಸಿವೆ ಎಂಬುದರ ಆಧಾರದಲ್ಲಿ ಈ ಅಧ್ಯಯನ ನಡೆಸಲಾಗಿದೆ. ಈ ವರದಿ ಭಾರತದ ಶೇ.50 ಅಥವಾ ಅದಕ್ಕಿಂತ ಹೆಚ್ಚಿನ ಸ್ಟಾರ್ಟ್ ಅಪ್ ಗಳು ದೇಶದ ಹೊರಗಿನ ಗ್ರಾಹಕರನ್ನು ಹೊಂದಿವೆ ಎಂದು ಈ ವರದಿ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು