ಜೋಧ್ಪುರ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಯೋಗ ಗುರು ರಾಮ್ದೇವ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಅಕ್ಟೋಬರ್ 5 ರಂದು ಬಾರ್ಮರ್ನ ಚೋಹ್ತಾನ್ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ರಾಜಸ್ಥಾನ ಹೈಕೋರ್ಟ್ ನಿರ್ದೇಶಿಸಿದ್ದು, ಬಂಧನದ ತಡೆಯನ್ನು ವಿಸ್ತರಿಸಿದೆ.
ಫೆಬ್ರವರಿ 2 ರಂದು ಬಾರ್ಮರ್ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮುಸ್ಲಿಮರ ವಿರುದ್ಧ ಟೀಕೆ ಮಾಡಿದ ಆರೋಪದ ಮೇಲೆ ಪಥಾಯಿ ಖಾನ್ ಅವರು ಫೆಬ್ರವರಿ 5 ರಂದು ಬಾರ್ಮರ್ನ ಚೋಹ್ತಾನ್ ಪೊಲೀಸ್ ಠಾಣೆಯಲ್ಲಿ ಯೋಗ ಗುರು ವಿರುದ್ಧ ದೂರು ದಾಖಲಿಸಿದ್ದಾರೆ.