ಉತ್ತರ ಪ್ರದೇಶ: ಉದ್ಯಮಿಯೊಬ್ಬ ವ್ಯಕ್ತಿ ಜತೆ ಜಗಳವಾಡಿ ಬಳಿಕ ಆತನನ್ನು ಫೈವ್ಸ್ಟಾರ್ ಹೋಟೆಲ್ನ ತಾರಸಿಯಿಂದ ಕೆಳಗೆ ತಳ್ಳಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಿ ವೆಡ್ಡಿಂಗ್ ಪಾರ್ಟಿಯಲ್ಲಿ ಮೊದಲು ಉದ್ಯಮಿ ಮಗ ಹಾಗೂ ವ್ಯಕ್ತಿಯೊಬ್ಬರ ನಡುವೆ ಮನಸ್ತಾಪ ಶುರುವಾಗಿತ್ತು. ಕೊನೆಗೆ ಜಗಳ ತಾರಕಕ್ಕೇರಿ ಉದ್ಯಮಿಯ ತಂದೆ ಆ ವ್ಯಕ್ತಿಯನ್ನು ತಾರಸಿಯಿಂದ ಕೆಳಗೆ ತಳ್ಳಿದ್ದಾರೆ.
ಗಾಯಗೊಂಡ ವ್ಯಕ್ತಿಯೂ ಕೂಡ ಉದ್ಯಮಿ ಎಂದು ತಿಳಿದುಬಂದಿದ್ದು ಅವರ ಹೆಸರು ಸಾರ್ಥಕ್ ಅಗರ್ವಾಲ್. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಹೋಟೆಲ್ನ ಟೆರೇಸ್ನಲ್ಲಿ ಈ ಘಟನೆ ನಡೆದಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲದೆ ಹತ್ತಿರದಲ್ಲೇ ನಿಂತಿದ್ದ ಇನ್ನೊಬ್ಬ ವ್ಯಕ್ತಿಯ ಮೇಲೂ ಕೂಡ ಹಲ್ಲೆ ಮಾಡಿದ್ದಾರೆ. ಇನ್ನು ಕುಡಿದ ಅಮಲಿನಲ್ಲಿ ಇಷ್ಟೆಲ್ಲಾ ನಡೆದಿದೆ ಎನ್ನಲಾಗಿದೆ.
UP : बरेली के होटल रेडिसन में व्यापारी नेता के पुत्र सार्थक अग्रवाल को मारपीट के बाद फर्स्ट फ्लोर से नीचे फेंक दिया। उसको गंभीर चोटें आई हैं।
दरअसल, होटल में एक फैमिली प्रोग्राम था। कुछ व्यापारी शराब पीए हुए थे। रिदिम अरोड़ा, सतीश अरोड़ा पर FIR हुई। pic.twitter.com/WEaRJxRSTR
— Sachin Gupta (@SachinGuptaUP) April 21, 2024