News Karnataka Kannada
Monday, May 06 2024
ಅಸ್ಸಾಂ

ನಾನು ಸಂಸದನಾದ ತಕ್ಷಣ 700 ಮದರಸಾಗಳನ್ನು ತೆರೆಯುತ್ತೇನೆ ಎಂದ ಬದ್ರುದ್ದೀನ್ ಅಜ್ಮಲ್ 

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಸವಾಲೆಸೆದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ನಾನು ಸಂಸದನಾದ ತಕ್ಷಣ 700 ಮದರಸಾಗಳನ್ನು ತೆರೆಯುತ್ತೇನೆ ಎಂದು  ಹೇಳಿಕೆ ನೀಡಿದ್ದಾರೆ.
Photo Credit : NewsKarnataka

ಅಸ್ಸಾಂ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಸವಾಲೆಸೆದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ನಾನು ಸಂಸದನಾದ ತಕ್ಷಣ 700 ಮದರಸಾಗಳನ್ನು ತೆರೆಯುತ್ತೇನೆ ಎಂದು  ಹೇಳಿಕೆ ನೀಡಿದ್ದಾರೆ.

ಬದ್ರುದ್ದೀನ್, ನಾವು ಅಸ್ಸಾಂನ ಕರೀಂಗಂಜ್ ಮತ್ತು ನಾಂಗಾಂವ್​ ಎಐಯುಡಿಎಫ್​ ಸಂಸದರೊಂದಿಗೆ 70 ಹೊಸ ಮದರಸಾಗಳನ್ನು ತೆರೆಯುತ್ತೇವೆ ಇದನ್ನು ನಿಮ್ಮ ಡೈರಿಯಲ್ಲಿ ಬರೆದಿಟ್ಟುಕೊಳ್ಳಿ ಎಂದು ಹೇಳಿದ್ದಾರೆ.

ಹಿಮಂತ ಬಿಸ್ವಾ ಶರ್ಮಾ ಕಳೆದ ವರ್ಷ, ಅಸ್ಸಾಂನ ಶಾಲಾ ಶಿಕ್ಷಣ ಇಲಾಖೆಯು 13 ಡಿಸೆಂಬರ್ 2023 ರಂದು ರಾಜ್ಯದಲ್ಲಿ 1281 ಮದರಸಾ ಸಂಸ್ಥೆಗಳನ್ನು ಸಾಮಾನ್ಯ ಶಾಲೆಗಳಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿತ್ತು.

ಅಸ್ಸಾಂನ 14 ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ಏಪ್ರಿಲ್ 19 ರಂದು ಐದು ಸ್ಥಾನಗಳಿಗೆ ಮತದಾನ ನಡೆದಿದೆ. ಮುಂದಿನ ಎರಡು ಹಂತಗಳಲ್ಲಿ ಉಳಿದ 9 ಸ್ಥಾನಗಳಿಗೆ ಮತದಾನ ನಡೆಯಲಿದೆ. ಉಳಿದ ಕ್ಷೇತ್ರಗಳಿಗೆ ಏಪ್ರಿಲ್ 26 ಮತ್ತು ಮೇ 7 ರಂದು ಮತದಾನ ನಡೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು