ಉತ್ತರಪ್ರದೇಶ : ಮದರಸಾದಲ್ಲಿ ಹನ್ನೊಂದು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಆರೋಪಿ ಮುಫ್ತಿ, 20 ಕ್ಕೂ ಅಧಿಕ ಬಾರಿ ನಿರಂತರವಾಗಿ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ.
ಇಕ್ರಾನ್ ನಗರದಲ್ಲಿರುವ ಮದರಸಾದ ಮುಫ್ತಿ ಅಬ್ದುಲ್, ಸುಮಾರು 7 ತಿಂಗಳ ಕಾಲ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಆರೋಪಿಯು ಇತರ ಮಕ್ಕಳೊಂದಿಗೆ ಇದೇ ರೀತಿಯ ಅಸಭ್ಯವಾಗಿ ವರ್ತಿಸುತ್ತಿದ್ದನು ಎಂದು ಈದ್ ಸಮಯದಲ್ಲಿ ಸಂತ್ರಸ್ತೆ ತನ್ನ ಮನೆಗೆ ಬಂದಾಗ ಕುಟುಂಬಕ್ಕೆ ಈ ವಿಷಯ ತಿಳಿಸಿದ್ದಾಳೆ.
ಘಟನೆ ಸಂಬಂಧ ಪೋಷಕರು ನೀಡಿರುವ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯ ವೈದ್ಯಕೀಯ ಚಿಕಿತ್ಸೆ ಮಾಡಲಾಗಿದೆ. ಆರೋಪಿ ಮುಫ್ತಿಯನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.