News Karnataka Kannada
Friday, May 03 2024
ಉತ್ತರ ಪ್ರದೇಶ

ಲಕ್ನೋ: ತಾಯಿಯ ಕೊಳೆತ ಶವದೊಂದಿಗೆ 10 ದಿನ ಕಳೆದ‌ ಮಗಳು

Dead
Photo Credit :

ಲಕ್ನೋ: 26 ವರ್ಷದ ಮಹಿಳೆಯೊಬ್ಬರು ಸುಮಾರು 10 ದಿನಗಳ ಕಾಲ ತನ್ನ ತಾಯಿಯ ಕೊಳೆತ ಶವದೊಂದಿಗೆ ಕಳೆದ ಘಟನೆ ಲಕ್ನೋದಲ್ಲಿ ನಡೆದಿದೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ ಆಕೆಯ ತಾಯಿ ಮೇ ಹತ್ತರಂದು ನಿಧನರಾದರು, ಆದರೆ ಆಕೆ ತಾಯಿಯ ಸಾವಿನ ಬಗ್ಗೆ ತನ್ನ ಸಂಬಂಧಿಕರು ಅಥವಾ ಸ್ನೇಹಿತರಿಗೆ ತಿಳಿಸಲಿಲ್ಲ.

ಮನೆಯಿಂದ ದುರ್ವಾಸನೆ ಬರುತ್ತಿದೆ ಎಂದು ನೆರೆಹೊರೆಯವರು ತಿಳಿಸಿದ್ದರಿಂದ, ಪೊಲೀಸರು ಬಾಗಿಲು ಒಡೆದು ನೋಡಿದಾಗ ಕೊಳೆತ ಶವ ಪತ್ತೆಯಾಯಿತು.

ಎಚ್‌ಎಎಲ್‌ನ ನಿವೃತ್ತ ಎಂಜಿನಿಯರ್ ಆಗಿದ್ದ ಸುನಿತಾ ದೀಕ್ಷಿತ್ 10 ದಿನಗಳ ಹಿಂದೆ ಮೃತಪಟ್ಟಿದ್ದು, ಆಕೆಯ ಮಗಳು ಅಂಕಿತಾ ದೀಕ್ಷಿತ್ (26) ಸುನೀತಾ ಅವರ ಕೋಣೆಯ ಪಕ್ಕದ ಕೋಣೆಯಲ್ಲಿ ವಾಸಿಸುತ್ತಿರುವುದು ಕಂಡುಬಂದಿದೆ.

ಘೋರ ವಾಸನೆಯ ಹೊರತಾಗಿಯೂ, ಅಂಕಿತಾ ತನ್ನ ತಾಯಿಯ ಸಾವಿನ ಬಗ್ಗೆ ಸಂಬಂಧಿಕರಿಗೆ ಅಥವಾ ನೆರೆಹೊರೆಯವರಿಗೆ ತಿಳಿಸಲಿಲ್ಲ ಅಥವಾ ಸಹಾಯವನ್ನು ಕೇಳಲಿಲ್ಲ.

ಸುನೀತಾ ದೀಕ್ಷಿತ್ ತನ್ನ ಮಗಳೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದರು. 1999ರಲ್ಲಿ ತಮ್ಮ ಪತಿ ರಜನೀಶ್ ದೀಕ್ಷಿತ್ ಅವರಿಗೆ ಆಕೆ ವಿಚ್ಛೇದನ ನೀಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು