News Karnataka Kannada
Monday, April 29 2024
ಉತ್ತರ ಪ್ರದೇಶ

ಲಕ್ನೋ: ಮದುವೆ ಮನೆಯಲ್ಲಿ ಬಾಲ್ಕಾನಿ ಕುಸಿದು ಇಬ್ಬರು ಸಾವು

17-year-old girl found murdered in field
Photo Credit :

ಲಕ್ನೋ, ಏ.22 : ಮದುವೆ ಸಂಭ್ರಮದಲ್ಲಿದ್ದ ಮನೆಯೊಂದರ ಬಾಲ್ಕನಿ ಕುಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಕನಿಷ್ಠ 30 ಮಂದಿ ಗಾಯಗೊಂಡು ಸಂಭ್ರಮ ಶೋಕದ ವಾತಾವರಣಕ್ಕೆ ತಿರುಗಿದ ಘಟನೆ ನಡೆದಿದೆ.

ಬಿಜ್ನೋರ್ ಪೊಲೀಸ್ ಠಾಣಾ ವ್ಯಾಪ್ತಿಯ ನುದ್ರಿಖೇಡ ಗ್ರಾಮದಲ್ಲಿ ಗುರುವಾರ ರಾತ್ರಿ ಮದುವೆ ಸಮಾರಂಭ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ. ಶಶೀಂದ್ರ ಯಾದವ್ ಅವರ ಮನೆಯಲ್ಲಿ ಅವರ ಮಗಳ ವಿವಾಹ ಸಂಭ್ರಮ ನಡೆಯುತ್ತಿತ್ತು. ಮದುವೆಯ ಮೆರವಣಿಗೆಯನ್ನು ಸ್ವಾಗತಿಸಲು ಹಲವಾರು ಮಹಿಳೆಯರು ಪೂರ್ವಜರ ಕಾಲದ ಮನೆಯ ಬಾಲ್ಕನಿಯಲ್ಲಿ ನಿಂತಿದ್ದರು. ತೂಕಕ್ಕೆ ಬಾಲ್ಕಾನಿ ಕುಸಿದಿದೆ ಎಂದು ಬಿಜ್ನೋರ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ರಾಜ್‍ಕುಮಾರ್ ತಿಳಿಸಿದ್ದಾರೆ.

ಘಟನೆಯಲ್ಲಿ ಶ್ರದ್ಧಾ (5), ಕಿಶೋರ್ ತಿವಾರಿ (45) ಸಾವನ್ನಪ್ಪಿದ್ದಾರೆ. ಸುಮಾರು 12 ಗಾಯಗೊಂಡಿದ್ದು, ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು