News Karnataka Kannada
Sunday, May 05 2024
ತೆಲಂಗಾಣ

ತೆಲಂಗಾಣ: ಇಲಿ ಕಚ್ಚಿ 40 ದಿನದ ಹಸುಗೂಸು ಮೃತ್ಯು

New Project 2023 12 25t112243.444
Photo Credit : News Kannada

ತೆಲಂಗಾಣ: 40 ದಿನದ ಹಸುಗೂಸಿನ ಮೂಗಿಗೆ ಇಲಿ ಕಚ್ಚಿ ಮಗು ಮೃತಪಟ್ಟಿರುವ ಘಟನೆ ನಾಗರ್ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. ಇಲಿ ಮಗುವಿನ ಮೂಗಿಗೆ ಕಚ್ಚಿದ್ದರಿಂದ ತೀವ್ರ ರಕ್ತಸ್ರಾವವಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ.

ನಾಗನೂಲು ಗ್ರಾಮದ ಲಕ್ಷ್ಮೀಕಲಾ ಹಾಗೂ ಶಿವ ಎಂಬವರು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ದಂಪತಿಗೆ 40 ದಿನಗಳ ಹಿಂದೆಯಷ್ಟೇ ಮಗು ಜನಿಸಿತ್ತು.

ಬಾಣಂತಿ ಲಕ್ಷ್ಮಿಕಲಾ ತನ್ನ ಹಸುಗೂಸಿನೊಂದಿಗೆ ನಾಗನೂಲು ಗ್ರಾಮದ ತವರು ಮನೆಯಲ್ಲಿ ವಾಸವಿದ್ದರು. ಆದರೆ ಎರಡು ದಿನಗಳ ಹಿಂದೆ ಮಗು ಮಲಗಿದ್ದಾಗ ಇಲಿಯೊಂದು ಮಗುವಿನ ಮೂಗಿಗೆ ಕಚ್ಚಿದೆ. ಮಗುವಿನ ಮೂಗಿನಿಂದ ತೀವ್ರ ರಕ್ತಸ್ರಾವ ಕಂಡು ಮಗುವಿನ ಸ್ಥಳೀಯ ನಾಗರ್ ಕರ್ನೂಲ್ ಜಿಲ್ಲಾಸ್ಪತ್ರೆಗೆ ಧಾವಿಸಿದ್ದಾರೆ. ಆದರೆ ಮಗುವಿನ ಸ್ಥಿತಿಯನ್ನು ಗಮನಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ಕರೆದೊಯ್ಯಬೇಕೆಂದು ಹೇಳಿದ್ದಾರೆ. ವೈದ್ಯರ ಸಲಹೆಯಂತೆ ಮಗುವನ್ನು ನಿಲೋಫರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿರುವುದು ತಿಳಿದುಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು