ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಚೆನ್ನೈನಲ್ಲಿ ಭಾರೀ ಮಳೆಯಾಗಿದೆ. 2015ರ ಬಳಿಕ ಚೆನ್ನೈ ಕಂಡ ಮಹಾ ಮಳೆ ಇದಾಗಿದೆ.
ಶನಿವಾರ ಆರಂಭವಾದ ಮಳೆ ಭಾನುವಾರದ ಬೆಳಗಿನವರೆಗೂ ಸುರಿದಿದೆ. ಎಡೆಬಿಡದೆ ಸುರಿದ ಮಳೆಗೆ ಚೆನ್ನೈ ಜನ ಹೈರಾಣಾಗಿದ್ದಾರೆ. ಚೆನ್ನೈನ ಅನೇಕ ಭಾಗಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದು, ಚೆನ್ನೈ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಹೆಚ್ಚಾಗಿದೆ. ಮಳೆ ಅಬ್ಬರ ಇನ್ನೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಭಾನುವಾರ ಬೆಳಗ್ಗೆ ನುಂಗಂಬಕ್ಕನಲ್ಲಿ 20.8 ಸೆಂ.ಮೀ ಮಳೆ ದಾಖಲಾಗಿದೆ. ಮೀನಕಂಬಕ್ಕಂ ಮತ್ತು ಎನ್ನೋರ್ನಲ್ಲಿ ಕ್ರಮವಾಗಿ 9.4ಸೆಂ.ಮೀ ಮಳೆ ಸುರಿದಿದೆ. ಚೆನ್ನೈನಲ್ಲಿ 2015ರ ನಂತರ ಸುರಿದ ಭಾರೀ ಮಳೆ ಇದಾಗಿದೆ. ದಟ್ಟ ಮೋಡಗಳು ಈ ಭಾಗದಲ್ಲಿ ಚಲಿಸುತ್ತಿದ್ದು, ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.
@praddy06 @ChennaiRains At a street near @agscinemas T Nagar pic.twitter.com/GIFFAZElP5
— Karthik Perumal (@karthikperumals) November 7, 2021