ಚೆನ್ನೈ: ಆರ್ಟಿಫಿಷಿಯಲ್ ಇನ್ಸೆಮಿನೇಶನ್ ಪ್ರಕ್ರಿಯೆಯನ್ನು ಕ್ರೂರ ಕೃತ್ಯ ಎಂದು ಕರೆದಿದೆ. ಈ ಕೃತ್ಯ ಪ್ರಾಣಿ ಹಿಂಸೆ ನಿಷೇಧ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ .
ಕೃತಕ ಸಂತಾನೋತ್ಪತ್ತಿ ಕ್ರಿಯೆಯಿಂದ ಪ್ರಾಣಿಗಳ ಸಂತಾನೋತ್ಪತ್ತಿಯಲ್ಲಿ ಆಸಕ್ತಿ ಕಳೆದು ಕೊಳ್ಳುತ್ತವೆ, ಹಾಗೂ ಇದರಿಂದ ನಿಸರ್ಗದ ಸಹಜ ಪ್ರಕ್ರಿಯೆಗೆ ವಿರೋಧ ಉಂಟು ಮಾಡಿದಂತಾಗುತ್ತದೆ ಎಂದು ನ್ಯಾಯಮುರ್ತಿ ತಿಳಿಸಿದ್ದಾರೆ
ನೈಸರ್ಗಿಕವಾಗಿ ಸಂತಾನೋತ್ಪತ್ತಿ ಮಾಡುವ ಉದ್ದೇಶಕ್ಕೆ ಹೋರಿಗಳನ್ನು ಬಳಸಿಕೊಳ್ಳುವುದನ್ನು ನ್ಯಾಯಾಲಯ ಸಮರ್ಪಕವಾದ ವಿಧಾನ ಎಂದು ಪರಿಗಣಿಸಿದೆ.
ನೈಸರ್ಗಿಕವಾಗಿ ಮಿಲನ ಹೊಂದುವುದು ಜಾನುವಾರುಗಳ ಹಕ್ಕು ಎಂದಿರುವ ಮದ್ರಾಸ್ ಹೈಕೋರ್ಟ್, ಅವುಗಳನ್ನು ಸಂತಾನೋತ್ಪತ್ತಿ ಮಾಡುವ ಯಂತ್ರಗಳನ್ನಾಗಿ ನೋಡಬಾರದು ಎಂದಿದೆ.