News Karnataka Kannada
Thursday, May 02 2024
ಕ್ರೀಡೆ

ತಾನಿನ್ನೂ ವಿದಾಯ ಘೋಷಿಸಿಲ್ಲ ಎಂದು ಸ್ಪಷ್ಟನೆ ನೀಡಿದ ವೆಸ್ಟ್ ಇಂಡೀಸ್ ಬ್ಯಾಟಿಂಗ್ ದಿಗ್ಗಜ ಕ್ರಿಸ್ ಗೇಲ್

Crisgel
Photo Credit :

ಅಬುಧಾಬಿ: ವೆಸ್ಟ್ ಇಂಡೀಸ್ ಬ್ಯಾಟಿಂಗ್ ದಿಗ್ಗಜ ಕ್ರಿಸ್ ಗೇಲ್ ಅವರು ತಾನಿನ್ನೂ ವಿದಾಯ ಘೋಷಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಗೇಲ್ ವಿದಾಯ ನೀಡಿದ್ದಾರೆ ಎಂಬ ಸುದ್ದಿಗಳ ಬೆನ್ನಲ್ಲೇ ವಿಂಡೀಸ್ ದೈತ್ಯ ಈ ಮಾತುಗಳನ್ನಾಡಿದ್ದಾರೆ.

ಕ್ರಿಸ್ ಗೇಲ್ ಈ ಪಂದ್ಯದಲ್ಲಿ ತನ್ನ ಕೊನೆಯ ಪಂದ್ಯದಂತೆ ಆಡಿದರು. ತಂಪು ಕನ್ನಡಕ ಹಾಕಿಕೊಂಡು ಬ್ಯಾಟಿಂಗ್ ಮಾಡಿದ ಗೇಲ್ 9 ಎಸೆತಗಳಲ್ಲಿ 15 ರನ್ ಗಳಿಸಿದರು. ತನ್ನ ಅಂತಿಮ ವಿಶ್ವಕಪ್ ಪಂದ್ಯವನ್ನು ಆನಂದಿಸುತ್ತಿದ್ದೇನೆ ಮತ್ತು ತನ್ನ ತವರು ಜಮೈಕಾದಲ್ಲಿ ವಿದಾಯ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲು ಬಯಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಈಗಾಗಲೇ ವಿದಾಯ ಘೋಷಿಸಿರುವ ಡ್ವೇನ್ ಬ್ರಾವೋ ತಮ್ಮ ಅಂತಿಮ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದರು. ಈ ಪಂದ್ಯದಲ್ಲಿ ಆಸೀಸ್ ಗೆಲುವು ಸಾಧಿಸಿತು.ನನ್ನ ಕೊನೆಯ ವಿಶ್ವಕಪ್ ಅನ್ನು ಆನಂದಿಸಲು ಪ್ರಯತ್ನಿಸುತ್ತಿದ್ದೆ. ಇದು ನನಗೆ ವೈಯಕ್ತಿಕವಾಗಿ ತುಂಬಾ ನಿರಾಶಾದಾಯಕ ವಿಶ್ವಕಪ್ ಆಗಿದೆ. ಇದು ಬಹುಶಃ ನನ್ನ ಕೆಟ್ಟ ವಿಶ್ವಕಪ್ ಆಗಿದೆ. ಆದರೆ ಈ ಸಂಗತಿಗಳು ನಡೆಯುತ್ತವೆ. ವೆಸ್ಟ್ ಇಂಡೀಸ್ ಕ್ರಿಕೆಟ್‌ನಲ್ಲಿ ನಮ್ಮಲ್ಲಿ ಇನ್ನೂ ಸಾಕಷ್ಟು ಶ್ರೇಷ್ಠ ಪ್ರತಿಭೆಗಳು ಬರುತ್ತಿವೆ” ಎಂದು ಗೇಲ್ ಐಸಿಸಿಗೆ ತಿಳಿಸಿದರು.

“ನಾನು ಯಾವುದೇ ನಿವೃತ್ತಿಯನ್ನು ಘೋಷಿಸಲಿಲ್ಲ ಆದರೆ ಜಮೈಕಾದಲ್ಲಿ ನನ್ನ ತವರು ಪ್ರೇಕ್ಷಕರ ಮುಂದೆ ಆಡಲು ನನಗೆ ಒಂದು ಪಂದ್ಯವನ್ನು ನೀಡಿದರೆ, ನಾನು ಅಲ್ಲೇ ವಿದಾಯ ಹೇಳಬಹುದು. ನಾನು ಇನ್ನೂ ಹೆಚ್ಚು ವಿಶ್ವಕಪ್ ಆಡಲು ಇಷ್ಟಪಡುತ್ತೇನೆ, ಆದರೆ ನನಗೆ ಅವಕಾಶ ನೀಡುತ್ತಾರೆ ಎಂದು ನಾನು ಭಾವಿಸುವುದಿಲ್ಲ”. ಎಂದು ಕ್ರಿಸ್ ಗೇಲ್ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು