ಜೈಪುರ: ಜೈಪುರದಲ್ಲಿರುವ ಬಾಲಾಪರಾಧಿ ಗೃಹದಿಂದ 22 ಕ್ರಿಮಿನಲ್ಗಳು ಪರಾರಿಯಾಗಿದ್ದು, ಇವರಲ್ಲಿ 22 ಮಕ್ಕಳ ಪೈಕಿ 13 ಜನರ ವಿರುದ್ಧ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ.
ಪರಾರಿ ಆಗಿರುವ ಮಕ್ಕಳು ಇನ್ನೂ ಪತ್ತೆ ಆಗಿಲ್ಲ. ಗ್ಯಾಸ್ ಕಟರ್ ನಿಂದ ಕಿಟಕಿಯ ಸರಳುಗಳನ್ನು ಕತ್ತರಿಸಿ, ಬೆಳಗಿನ ಜಾವ 4 ರಿಂದ 5 ಗಂಟೆ ವೇಳೆಗೆ ಪರಾರಿಯಾಗಿದ್ದಾರೆ. ಸದ್ಯ ಜೈಲು ಆಡಳಿತ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಬಾಲಾಪರಾಗೃಹದ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ಎಲ್ಲರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಪ್ರತಿಯೊಬ್ಬರ ವಯಸ್ಸು 12 ರಿಂದ 16 ವರ್ಷಗಳು ಎಂದು ಹೇಳಲಾಗುತ್ತದೆ. ಮಕ್ಕಳ ಮನೆಗಳ ಸುತ್ತಲಿನ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ. ಮಕ್ಕಳ ಪತ್ತೆಗೆ ತಂಡ ರಚಿಸಲಾಗಿದೆ.