News Karnataka Kannada
Saturday, May 04 2024
ರಾಜಸ್ಥಾನ

ರಾಜಸ್ಥಾನದ ನೂತನ ಡಿಸಿಎಂ ದಿಯಾ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲಿದೆ

ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಜಯಭೇರಿ ಬಾರಿಸಿದೆ. ಅದೇ ರೀತಿ ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಆರ್‌ ಎಸ್‌ ಎಸ್‌ ಮೂಲದ ಭಜನ್‌ಲಾಲ್‌ ಶರ್ಮಾ ಅವರನ್ನು ರಾಜಸ್ಥಾನದ ನೂತನ ಸಿಎಂ ಆಯ್ಕೆ ಮಾಡುವ ಮೂಲಕ ಬಿಜೆಪಿ ಅಚ್ಚರಿ ಮೂಡಿಸಿದೆ. ಈ ಬೆನ್ನಲ್ಲೇ ರಾಜವಂಶಸ್ಥೆ ದಿಯಾ ಕುಮಾರಿ ಹಾಗೂ ಹಿರಿಯ ನಾಯಕ ಪ್ರೇಮ್‌ಚಂದ್‌ ಬೈರ್ವಾ ಅವರನ್ನ ಉಪಮುಖ್ಯಮಂತ್ರಿಗಳಾಗಿ ನೇಮಕ ಮಾಡಿದೆ
Photo Credit : News Kannada

ಜೈಪುರ: ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಜಯಭೇರಿ ಬಾರಿಸಿದೆ. ಅದೇ ರೀತಿ ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಆರ್‌ ಎಸ್‌ ಎಸ್‌ ಮೂಲದ ಭಜನ್‌ಲಾಲ್‌ ಶರ್ಮಾ ಅವರನ್ನು ರಾಜಸ್ಥಾನದ ನೂತನ ಸಿಎಂ ಆಯ್ಕೆ ಮಾಡುವ ಮೂಲಕ ಬಿಜೆಪಿ ಅಚ್ಚರಿ ಮೂಡಿಸಿದೆ. ಈ ಬೆನ್ನಲ್ಲೇ ರಾಜವಂಶಸ್ಥೆ ದಿಯಾ ಕುಮಾರಿ ಹಾಗೂ ಹಿರಿಯ ನಾಯಕ ಪ್ರೇಮ್‌ಚಂದ್‌ ಬೈರ್ವಾ ಅವರನ್ನ ಉಪಮುಖ್ಯಮಂತ್ರಿಗಳಾಗಿ ನೇಮಕ ಮಾಡಿದೆ.

ರಾಜ್ಯಸ್ಥಾನದ ನೂತನ ಉಪಮುಖ್ಯಮಂತ್ರಿಗಳಲ್ಲಿ ಒಬ್ಬರಾದ ದಿಯಾ ಕುಮಾರಿ ಅವರು 1970ರ ಜನವರಿ 30 ರಂದು ರಾಜಮನೆತನದಲ್ಲಿ ಜನಿಸಿದರು. ಅವರ ಅಜ್ಜ ಮಾನ್‌ ಸಿಂಗ್‌ II (2ನೇ ಮಾನ್‌ಸಿಂಗ್‌) ಜೈಪುರದ ಕೊನೆಯ ಆಡಳಿತ ಮಹರಾಜರಾಗಿದ್ದರು. ಇನ್ನೂ ದಿಯಾ ಕುಮಾರಿ ಅವರ ತಂದೆ ಬ್ರಿಗೇಡಿಯರ್ ಸವಾಯಿ ಭವಾನಿ ಸಿಂಗ್ ಅವರಿಗೆ 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಹೋರಾಡಿದ ಶೌರ್ಯಕ್ಕಾಗಿ ಮಹಾವೀರ ಚಕ್ರ ನೀಡಿ ಗೌರವಿಸಲಾಗಿತ್ತು. ದಿಯಾ ಕುಮಾರಿ ಅವರು ಮಹಾರಾಣಿ ಗಾಯತ್ರಿ ದೇವಿ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣ ಪೂರ್ಣಗೊಳಿಸಿದರು.

ಜೈಪುರದ ಮಹಾರಾಣಿ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಮುಗಿಸಿದರು. ಬಳಿಕ ನರೇಂದ್ರ ಸಿಂಗ್ ಎಂಬವರನ್ನ ವಿವಾಹವಾದರು. ದಂಪತಿಗೆ ಜೈಪುರದ ರಾಜವಂಶಸ್ಥ ಪದ್ಮನಾಭ್ ಸಿಂಗ್ ಸೇರಿದಂತೆ ಅವರಿಗೆ ಮೂವರು ಮಕ್ಕಳಿದ್ದಾರೆ. ಆದ್ರೆ 2018ರಲ್ಲಿ ದಿಯಾ ಕುಮಾರಿ ಪತಿಗೆ ವಿಚ್ಛೇದನ ನೀಡಿದ್ದರು.

ಕಾಲೇಜು ಶಿಕ್ಷಣದ ಬಳಿಕ ರಾಜಕೀಯ ಜೀವನದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ದಿಯಾ ಕುಮಾರಿ 2013ರಲ್ಲಿ ರಾಜಸ್ಥಾನದ ಸವಾಯಿ ಮಾಧೋಪುರ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾದರು. ಅಲ್ಲಿಂದ ಅವರ ರಾಜಕೀಯ ಜೀವನ ಶುರುವಾಯಿತು. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಮೇಲೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ಕಡೆಗೆ ಆಸಕ್ತಿ ತೋರಿದರು. ಇದರಿಂದಲೇ 2019ರ ಲೋಕಸಭಾ ಚುನಾವಣೆಯಲ್ಲಿ ದಿಯಾ ರಾಜ್‌ಸಮಂದ್‌ ಕ್ಷೇತ್ರದಿಂದ ಸ್ಪರ್ಧಿಸಿ ಅತ್ಯಧಿಕ ಬಹುಮತದಿಂದ ಗೆದ್ದು ಸಂಸದರಾದರು. ಈ ಮೂಲಕ ರಾಷ್ಟ್ರ ರಾಜಕಾರಣ ಪ್ರವೇಶಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು