News Karnataka Kannada
Monday, April 29 2024
ಬೆಂಗಳೂರು

ಬೆಂಗಳೂರಲ್ಲಿ ಮಗಳ ಜೊತೆ ಐಸ್ ಕ್ರೀಮ್ ಸವಿದ ನಾರಾಯಣಮೂರ್ತಿ

Akshata
Photo Credit : Twitter

ಬೆಂಗಳೂರು:  ಬ್ರಿಟನ್‌ ಪ್ರಧಾನಿ ರಿಶಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ, ತಮ್ಮ ತಂದೆ ನಾರಾಯಣಮೂರ್ತಿ ಜೊತೆ ಬೆಂಗಳೂರಲ್ಲಿ ಐಸ್​ಕ್ರೀಂ ಸವಿದಿದ್ದಾರೆ. ಅಕ್ಷತಾ ಮೂರ್ತಿ ಬ್ರಿಟನ್​ ಪ್ರಥಮ ಮಹಿಳೆ ಮತ್ತು ನಾರಾಯಣಮೂರ್ತಿ ಅವರ  ಮಗಳಾಗಿದ್ದಾರೆ.

ತಂದೆ-ಮಗಳು ಬೆಂಗಳೂರಿನ ಜನಪ್ರಿಯ ಐಸ್ ಕ್ರೀಮ್ ಜಾಯಿಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜಯನಗರದಲ್ಲಿರುವ ಐಕಾನಿಕ್ ಕಾರ್ನರ್ ಹೌಸ್‌ನಲ್ಲಿ ಇಬ್ಬರು ಐಸ್​ಕ್ರೀಂ ಸವಿದಿದ್ದಾರೆ. ಕುಟುಂಬದ ಸಮಯವನ್ನು ಆನಂದಿಸುತ್ತಿರೋದನ್ನು ಫೋಟೋದಲ್ಲಿ ನೋಡಬಹುದಾಗಿದೆ. ಕ್ಯಾಶುವಲ್ ಡ್ರೆಸ್​ನಲ್ಲಿದ್ದ ತಂದೆ-ಮಗಳು ಐಸ್ ಕ್ರೀಂ ಕಪ್ ಹಿಡಿದು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಯಾವುದೇ ಹಮ್ಮು-ಬಿಮ್ಮು ಇಲ್ಲದೇ ಸಾಮಾನ್ಯ ಚೇರ್​​ ಮೇಲೆ ಕೂತಿರೋದನ್ನೂ ನಾವು ಫೋಟೊದಲ್ಲಿ ನೋಡಬಹುದಾಗಿದೆ.

ಇನ್ನು ರಿಶಿ ಸುನಕ್ ಮತ್ತು ಪತ್ನಿ ಅಕ್ಷತಾ ಮುರ್ತಿ ಕಳೆದ ಸೆಪ್ಟೆಂಬರ್​​ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. G20 ಶೃಂಗಸಭೆ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದಿದ್ದರು. ರಿಶಿ ಸುನಕ್ ಪ್ರಧಾನಿ ಆದ ಮೇಲೆ ಭಾರತದ ಮೊದಲ ಭೇಟಿ ಅದಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು