News Karnataka Kannada
Thursday, May 09 2024
ರಾಜಸ್ಥಾನ

180 ಮಿಲಿಯನ್ ವರ್ಷ ಹಳೆಯ ಡೈನೋಸಾರ್‌ ಮೊಟ್ಟೆ ಪತ್ತೆ

180-million-year-old dinosaur egg discovered
Photo Credit : News Kannada

ಜೈಸಲ್ಮೇರ್‌: ಜೈಸಲ್ಮೇರ್‌ನ ಜೇಥ್ವಾಯಿ-ಗಜ್ರೂಪ್ ಸಾಗರ್ ಬೆಟ್ಟಗಳಲ್ಲಿ ಡೈನೋಸಾರ್ ಮೊಟ್ಟೆಯ ಪಳೆಯುಳಿಕೆಯನ್ನು ಗುರುತಿಸಿರುವುದಾಗಿ ವಿಜ್ಞಾನಿಯೊಬ್ಬರು ಹೇಳಿದ್ದಾರೆ.

ಶನಿವಾರ ಪತ್ತೆಯಾದ ಮೊಟ್ಟೆಯ ಪಳೆಯುಳಿಕೆಯು ಸುಮಾರು 180 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. 167 ಮಿಲಿಯನ್ ವರ್ಷಗಳ ಹಿಂದಿನ ಸಸ್ಯಹಾರಿ, ಉದ್ದನೆ ಕತ್ತಿನ ಡೈನೋಸಾರ್‌ನ ಪಳೆಯುಳಿಕೆಯ ಅವಶೇಷಗಳು 2018 ರಲ್ಲಿ ಕಂಡುಬಂದ ಅದೇ ಪ್ರದೇಶದಲ್ಲಿ ಪತ್ತೆಯಾಗಿದೆ.

ಈ ಮೊಟ್ಟೆಯ ಬಗ್ಗೆ ವಿಜ್ಞಾನಿ ಡಾ ನಾರಾಯಣ್ ದಾಸ್ ಇಂಖಿಯಾ, ವಿವರ ನೀಡಿದ್ದು, ಇದು ಸುಮಾರು 180 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಡೈನೋಸಾರ್ ಮೊಟ್ಟೆಯ ಪಳೆಯುಳಿಕೆಯಾಗಿರಬಹುದು ಎಂದು ತಿಳಿಸಿದ್ದಾರೆ. ಅಲ್ಲದೆ 100 ಗ್ರಾಂ ತೂಕದ ಮತ್ತು ಅಂದಾಜು 1 ರಿಂದ 1.5 ಇಂಚು ಉದ್ದದ ಮೊಟ್ಟೆಯ ಪಳೆಯುಳಿಕೆಯನ್ನು ಪರೀಕ್ಷೆ ಮತ್ತು ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಮೊಟ್ಟೆ ಮೆಸೊಜೊಯಿಕ್ ಯುಗಕ್ಕೆ ಸೇರಿರಬಹುದು ಎಂದು ವಿವರಿಸಿದ್ದಾರೆ. ಈ ಅವಧಿಯನ್ನು ಡೈನೋಸಾರ್‌ಗಳ ಯುಗ” ಎಂದು ಕರೆಯಲಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು