News Karnataka Kannada
Thursday, May 02 2024
ರಾಜಸ್ಥಾನ

ಪ್ರಿಯಕರನಿಗಾಗಿ ಕುವೈತ್‌ ಗೆ ಹಾರಿದ ದೀಪಿಕಾ ಈಗ ನಜೀರಾ

Deepika, who flew to Kuwait for boyfriend, is now Nazira
Photo Credit : IANS

ಜೈಪುರ: ಪಾಕಿಸ್ತಾನದ ಸೀಮಾ ಹೈದರ್​, ಭಾರತದ ಅಂಜು ಫಾತಿಮಾ ತಮ್ಮ ಪ್ರಿಯಕರನಿಗಾಗಿ ದೇಶದ ಗಡಿ ದಾಟಿ ಜಗತ್ತಿನೆಲ್ಲೆಡೆ ಸುದ್ದಿಯಾಗಿದ್ದರು. ಅದೇ ರೀತಿ ರಾಜಸ್ಥಾನದ ದುಂಗರ್​ಪುರ ಜಿಲ್ಲೆಯ , ದೀಪಿಕಾ ಪಾಟೀದಾರ್​(35) ತನ್ನ ಪ್ರಿಯಕರ ಇರ್ಫಾನ್​ ಹೈದರ್​ಗಾಗಿ ಮನೆಯಲ್ಲಿದ್ದ ಚಿನ್ನಾಭರಣ, ಹಣವನ್ನು ದೋಚಿ ಪರಾರಿ ಕುವೈತ್‌ ಸೇರಿಕೊಂಡಿದ್ದರು. ಇದೀಗ ಆಕೆ ಇಸ್ಲಾಂಗೆ ಮತಾಂತರಗೊಂಡಿದ್ದು, ನಜೀರಾ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ.

ದೀಪಿಕಾ ಪಾಟೀದಾರ್​ಗೆ ಈಗಾಗಲೇ ಮದುವೆಯಾಗಿದ್ದು, 11 ಹಾಗೂ 7 ವರ್ಷದ ಇಬ್ಬರು ಮಕ್ಕಳಿದ್ದಾರೆ. ಆಕೆಯ ಪತಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದು, ಆತ ಕುಟುಂಬದೊಂದಿಗೆ ಇರಲಿಲ್ಲ. ತಿಂಗಳಿಗೊಮ್ಮೆ ರಾಜಸ್ಥಾನಕ್ಕೆ ಬರುತ್ತಿದ್ದರು. ದೀಪಿಕಾ ಕುಟುಂಬಸ್ಥರು ಹಾಗೂ ಪತಿಯ ಬಳಿ ಅನಾರೋಗ್ಯದ ಕಾರಣ ನೀಡಿ ಚಿಕಿತ್ಸೆ ಪಡೆಯಲೆಂದು ಮಹಿಳೆ ಹಲವು ಬಾರಿ ರಾಜಸ್ಥಾನದ ಉದಯ್​ಪುರ ಹಾಗೂ ಗುಜರಾತ್​ಗೆ ಭೇಟಿ ನೀಡುತ್ತಿದ್ದರು.

ಅದರಂತೆ ಜುಲೈ 10ರಂದು ಮಹಿಳೆ ಚಿಕಿತ್ಸೆಗಾಗಿ ಗುಜರಾತ್​ಗೆ ತೆರಳುತ್ತಿರುವುದಾಗಿ ಹೇಳಿ ಮನೆಯಿಂದ ಹೊರಟ್ಟಿದ್ದಾರೆ. ಜುಲೈ 13ರಂದು ಆಕೆಯ ಪತಿಗೆ ವಾಟ್ಸ್​ಅಪ್​ ಮೂಲಕ ಕರೆ ಮಾಡಿ ನಿಮ್ಮಿಂದ ಬೇಜಾರಾಗಿದ್ದು, ದೂರ ಹೋಗುತ್ತಿರುವುದಾಗಿ ತಿಳಿಸಿದ್ದರು. ಗುಜರಾತ್​ನ ಸಬರ್​ಕಾಂತದಲ್ಲಿರುವ ಖೇಡ್​ ಬ್ರಹ್ಮದಲ್ಲಿ ಇಬ್ಬರು ಭೇಟಿಯಾಗಿದ್ದು, ಬಳಿಕ ಅಲ್ಲಿಂದ ಕುವೈತ್​ಗೆ ಹಾರಿದ್ದಾರೆ ಎಂದು ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು