News Karnataka Kannada
Saturday, April 27 2024
ದೇಶ

ಈ ಬಾರಿ ವಿನೂತನ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಧಾನಿ ಮೋದಿ

Modi
Photo Credit : News Kannada

ನವದೆಹಲಿ: ಪ್ರಧಾನಿ ಮೋದಿ ಅವರು ಇಂದು 73ನೇ ವಸಂತಕ್ಕೆ ಕಾಲಿಟ್ಟಿದ್ದು, ಕಳೆದ 10 ವರ್ಷಗಳಲ್ಲಿ ಹಲವು ಮಹತ್ವದ ಯೋಜನೆಗಳಿಗೆ ಚಾಲನೆ ಹಾಗೂ ಸಾಮಾಜಿಕ ಕಳಕಳಿಯ ಮೆರೆದು ವಿಭಿನ್ನವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

2014ರ ಹುಟ್ಟುಹಬ್ಬದ ಸಂದರ್ಭದಲ್ಲಿ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಅಮ್ಮನ ಹೆಸರಿನಲ್ಲಿ ಹಣವನ್ನು ಜಮ್ಮು ಮತ್ತು ಕಾಶ್ಮೀರ ಪ್ರವಾಹ ಪರಿಹಾರ ನಿಗೆ ದೇಣಿಗೆ ನೀಡಿದ್ದರು.

2015ರಲ್ಲಿ ಸೇನಾ ಸ್ಮಾರಕಕ್ಕೆ ಭೇಟಿ ನೀಡುವ 65ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಅವರು, 1965ರ ಭಾರತ-ಪಾಕ್ ಯುದ್ಧದಲ್ಲಿ ಹೋರಾಡಿದ್ದ ಭಾರತೀಯ ಯೋಧರು ಮತ್ತು ಸಶಸ್ತ್ರ ಪಡೆಗಳ ಶೌರ್ಯವನ್ನು ಸ್ಮರಿಸಿದ್ದರು. 2021ರಲ್ಲಿ 71ನೇ ಹುಟ್ಟುಹಬ್ಬವನ್ನು ಕೋವಿಡ್ ತಡೆಗಟ್ಟುವ ಸಂದೇಶದೊಂದಿಗೆ ಆಚರಿಸಿಕೊಂಡಿದ್ದರು.

2022ರಲ್ಲಿ ಪ್ರಧಾನಿಯವರ ಜನ್ಮದಿನದ ಪ್ರಮುಖ ಅಂಶವೆಂದರೆ ಅಳಿವಿನಂಚಿನಲ್ಲಿರುವ ಚೀತಾಗಳನ್ನು ಭಾರತಕ್ಕೆ ತಂದು, ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ತರಲಾದ ಎಂಟು ಚೀತಾಗಳನ್ನು ಬಿಡುಗಡೆ ಮಾಡಿದ್ದರು.

ಈ ಬಾರಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ನವಭಾರತದಲ್ಲಿ ವಿಶ್ವಕರ್ಮರ ಕೌಶಲ್ಯಗಳಿಗೆ ಗೌರವ ಸಮರ್ಪಣೆ, ಪಿಎಂ ವಿಶ್ವಕರ್ಮ ಯೋಜನೆ ಉದ್ಘಾಟನೆ ಸೇರಿದಂತೆ ವಿವಿಧ ಮಹತ್ವದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು