ನವದೆಹಲಿ : ದೇಶದ ಬಡ ಮತ್ತು ಮಧ್ಯಮ ವರ್ಗದ ಜನರ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗಾಗಿ ಕೇಂದ್ರ ಸರ್ಕಾರ ಮತ್ತೊಂದು ಯೋಜನೆಯನ್ನ ತರಲಿದೆ. ಆಗಸ್ಟ್ 15ರಂದು ಭಾರತದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವ್ರು ಕೆಂಪು ಕೋಟೆಯಲ್ಲಿ ಘೋಷಿಸಿದ ವಿಶ್ವಕರ್ಮ ಯೋಜನೆಗೆ ಇಂದು (ಸೆ.17) ಚಾಲನೆ ನೀಡಲಿದ್ದಾರೆ.
ಅದರಂತೆ, ಇಂದು ವಿಶ್ವಕರ್ಮ ಜಯಂತಿಯಿದ್ದು, ಇದೇ ದಿನ ಕೇಂದ್ರ ಸರ್ಕಾರ ಈ ಹೊಸ ಯೋಜನೆ ತರುತ್ತಿದೆ. ಅಂದ್ಹಾಗೆ, ಇಂದು ಪ್ರಧಾನಿ ನರೇಂದ್ರ ಮೋದಿ ಜನ್ಮದಿನವು ಕೂಡ ಅನ್ನೋದು ಗಮನಾರ್ಹ.
ವಿಶ್ವಕರ್ಮ ಯೋಜನೆ ಮೂಲಕ ಕೇಂದ್ರ ಸರ್ಕಾರ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನ ಉತ್ತೇಜಿಸಲು ಆರ್ಥಿಕ ನೆರವು ನೀಡುತ್ತದೆ. ಸರಳ ಷರತ್ತುಗಳೊಂದಿಗೆ ಅರ್ಹ ಕರಕುಶಲಕರ್ಮಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಕೇಂದ್ರದ ಪ್ರಕಾರ ವಿಶ್ವಕರ್ಮ ಯೋಜನೆಯಿಂದ ಸುಮಾರು 30 ಲಕ್ಷ ಕುಟುಂಬಗಳು ಪ್ರಯೋಜನ ಪಡೆಯಲಿವೆ.