ನವದೆಹಲಿ: ಪ್ರಧಾನಿ ಮೋದಿ ಅವರ 73ನೇ ಜನ್ಮದಿನವಾದ ಇಂದು ವಿಶ್ವದರ್ಜೆಯ ಪ್ರದರ್ಶನ ಕೇಂದ್ರದ ಉದ್ಘಾಟನೆ ಆಗಿದೆ. ರಾಷ್ಟ್ರರಾಜಧಾನಿಯ ದ್ವಾರಕಾ ಪ್ರದೇಶದಲ್ಲಿ ಪ್ರಧಾನಿಯವರು ತಮ್ಮ ಜನ್ಮದಿನದಂದು ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಎಕ್ಸ್ಪೋ ಸೆಂಟರ್ನ ಮೊದಲ ಹಂತವನ್ನು ಉದ್ಘಾಟಿಸಿದ್ದಾರೆ.
ಯಶೋಭೂಮಿ ಎಂದು ಕರೆಯಲಾಗುವ ಈ ಎಕ್ಸ್ಪೋ ಸೆಂಟರ್ಗೆ ಎಕ್ಸ್ಪ್ರೆಸ್ವೆ ಕನೆಕ್ಟಿವಿಟಿ ಕೂಡ ನೀಡಲಾಗಿದೆ. ದ್ವಾರಕಾ ಸೆಕ್ಟರ್ 21ನಲ್ಲಿರುವ ಏರ್ಪೋರ್ಟ್ ಮೆಟ್ರೋ ಎಕ್ಸ್ಪ್ರೆಸ್ ಲೈನ್ ಅನ್ನು ಯಶೋಭೂಮಿ ಮೆಟ್ರೋ ಸ್ಟೇಷನ್ವರೆಗೂ ವಿಸ್ತರಿಸಲಾಗಿದೆ. ಯಶೋಭೂಮಿ ಮೆಟ್ರೋಸ್ಟೇಷನ್ ಸ್ಥಳವು ದ್ವಾರಕಾ ಸೆಕ್ಟರ್ 25ರಲ್ಲಿ ಇದೆ.
ಯಶೋಭೂಮಿ ಎಂಬುದು ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಅಂಡ್ ಎಕ್ಸ್ಪೋ ಸೆಂಟರ್ (ಐಐಸಿಸಿ). ಅಂತಾರಾಷ್ಟ್ರೀಯ ಸಭೆ, ಸಮಾರಂಭ, ಪ್ರದರ್ಶನಗಳನ್ನು ಆಯೋಜಿಸಲು ಇರುವ ಬೃಹತ್ ಕೇಂದ್ರವಾಗಿದೆ. ಇಂಥ ಸೌಲಭ್ಯ ಹೊಂದಿರುವ ವಿಶ್ವದ ಬೃಹತ್ ಕಟ್ಟಡಗಳ ಪೈಕಿ ಯಶೋಭೂಮಿ ಒಂದೆನಿಸಿದೆ.