ವೈರಲ್: ಸಾವಿರಾರು ಮಂದಿ ಭಾಗಿಯಾಗಿದ್ದ ಮದುವೆಯಲ್ಲಿ ಪುರೋಹಿತರಿಗೆ ಮುಜುಗರ ಉಂಟು ಮಾಡಿದ ಘಟನೆಯೊಂದು ವೈರಲ್ ಆಗಿದೆ. ಹೌದು. . ಪುರೋಹಿತರು ಇಲ್ಲದೆಯೇ ಮದುವೆ ಆಗುತ್ತಾ ಹೇಳಿ. ಆದರೆ ಇಲ್ಲಿ ಮದುವೆ ಶಾಸ್ತ್ರಗಳನ್ನು ಮಾಡಿಸಲು ಬಂದ ಪುರೋಹಿತರಿಗೆ ಯುವಕರು ಅವಮಾನ ಮಾಡಿದ್ದಾರೆ.
ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವೈರಲ್ ಆದ ವಿಡಿಯೋದಲ್ಲಿ ಹೀಗೆ ಮದುವೆ ಮಾಡಿಸ್ತಿದ್ದ ಪುರೋಹಿತರ ತಲೆ ಮೇಲೆ ಕೆಲ ಯುವಕರು ಬ್ಯಾಗ್ ಹಾಕಿ ಅವಮಾನ ಮಾಡುತ್ತಾರೆ. ಏನೋ ಬಿಡು ಅಂತ ಪುರೋಹಿತರು ಸುಮನಾಗುತ್ತಾರೆ.
ಆದರೆ, ಮೇಲಿಂದ ಮೇಲಿಂದ ಪುರೋಹಿತರಿಗೆ ಯುವಕರು ಅವಮಾನಿಸುತ್ತಾರೆ. ಸಾವಿರಾರು ಜನರು ಇದ್ದ ಮದುವೆ ಮಂಟಪದಲ್ಲಿ ಹೀಗೆ ಪುರೋಹಿತರಿಗೆ ಯುವಕರು ಕ್ವಾಟ್ಲೆ ಕೊಟ್ಟಿದ್ದಾರೆ. ಇದರಿಂದ ಸಿಟ್ಟಿಗೆದ್ದಿದ್ದ ಪುರೋಹಿತರು, ನಾನು ಯಾವ ಮದುವೆನೂ ಮಾಡಿಸಲ್ಲ ಅಂತ ಅಲ್ಲಿಂದ ಹೊರಟು ಹೋಗಿದ್ದಾರೆ.
ಇದೇ ವಿಡಿಯೋವನ್ನು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಪೂಜಾರಿಯೊಬ್ಬರಿಗೆ ಮಾಡಿದ ಈ ಅವಮಾನ ನೋಡಿ ಮನಸಿಗೆ ನೋವಾಗಿದೆ. ಅವರು ಶುಭ ಕಾರ್ಯವನ್ನು ಮಾಡುತ್ತಿರುವಾಗ ಜನರು ಹೇಗೆ ಮಾಡಿದ್ದಾರೆ ನೋಡಿ ಎಂದು ಬರೆದುಕೊಂಡಿದ್ದಾರೆ.
Seeing this insult to a priest is very heartbreaking. How could people do this when he is performing Shubh Karyam, & how the Yajaman let this happen?
pic.twitter.com/2VOOP4j2Q9— K.Annamalai Ⓟⓐⓡⓞⓓⓨ (@Annamalai_K_) April 20, 2024