ಭವಾನಿಪಟ್ಟಣ: ಬಿಜು ಜನತಾ ದಳ (ಬಿಜೆಡಿ) ಶಾಸಕ ಭುಪಿಂದರ್ ಸಿಂಗ್ ಬ್ಯಾಟ್ ಬೀಸಲು ಹೋಗಿ ನೆಲಕ್ಕುರುಳಿ ಗಾಯಗೊಂಡಿರುವ ಘಟನೆ ಕಲಹಂಡಿ ಜಿಲ್ಲೆಯ ಬೆಲ್ಖಂಡಿಯಲ್ಲಿ ನಡೆದಿದೆ.
ಸೋಮವಾರದಂದು ನಾರ್ಲದಲ್ಲಿ ಕ್ರೀಡಾಕೂಟವನ್ನು ಉದ್ಘಾಟಿಸಿದ ಭುಪಿಂದರ್ ಸಿಂಗ್ ಕ್ರಿಕೆಟ್ ಪಿಚ್ನಲ್ಲಿ ಬ್ಯಾಟ್ ಬೀಸಲು ಮುಂದಾದರು. ಈ ವೇಳೆ ಬ್ಯಾಲೆನ್ಸ್ ತಪ್ಪಿ ಕೆಳಕ್ಕೆ ಬಿದ್ದಿದ್ದಾರೆ.
ಬಿದ್ದ ಪರಿಣಾಮ ತಲೆ ನೆಲಕ್ಕೆ ಬಡಿದುಕೊಂಡು ಗಾಯಗೊಂಡಿದ್ದಾರೆ. 72 ವರ್ಷದ ಭುಪಿಂದರ್ ಸಿಂಗ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಸದ್ಯ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
Heavy batsman 😭😭 pic.twitter.com/CZnfridTjv
— Aman_Chain 🇮🇳 (@Amanprabhat9) December 27, 2023