ಒಡಿಶಾ: ನಾಲ್ಕು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ 74 ವರ್ಷದ ವ್ಯಕ್ತಿಗೆ ಒಡಿಶಾದ ಮಯೂರ್ಭಂಜ್ ಜಿಲ್ಲಾ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.ಅತ್ಯಾಚಾರ ಸಂತ್ರಸ್ತೆಗೆ 7 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನ್ಯಾಯಾಲಯ ಗುರುವಾರ ನಿರ್ದೇಶನ ನೀಡಿದೆ.
ಬರಿಪಾದ ಪೋಕ್ಸೊ(POCSO) ನ್ಯಾಯಾಧೀಶೆ ಸುಮಿತಾ ಜೆನಾ ಅವರು ಆರೋಪಿಗೆ ₹ 10,000 ದಂಡ ವಿಧಿಸಿದ್ದಾರೆ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಅಭಿನಾ ಪಟ್ನಾಯಕ್ ಹೇಳಿದ್ದಾರೆ.
ಏಪ್ರಿಲ್ 27, 2018 ರಂದು 17 ವರ್ಷದ ಬಾಲಕಿ ಜಾರ್ಪೋಖಾರಿಯಾ ಬ್ಲಾಕ್ನ ತನ್ನ ಹಳ್ಳಿಯ ಸಮೀಪವಿರುವ ಕಾಡಿಗೆ ಮೇಕೆಗಳನ್ನು ಮೇಯಿಸಲು ಹೋಗಿದ್ದಳು. ಈ ವೇಳೆ ಈ ಘಟನೆ ನಡೆದಿದೆ. ಕೆಲ ದಿನಗಳ ನಂತರ ಬಾಲಕಿ ಗರ್ಭಿಣಿಯಾಗಿದ್ದು, ಮಗುವಿಗೆ ಜನ್ಮ ನೀಡಿದ್ದಾಳೆ.
ಬಾಲಕಿಯ ಹೇಳಿಕೆ, ವೈದ್ಯಕೀಯ ವರದಿಗಳು ಮತ್ತು 20 ಸಾಕ್ಷಿಗಳ ಹೇಳಿಕೆಗಳನ್ನು ಆಧರಿಸಿ ತೀರ್ಪು ನೀಡಲಾಗಿದೆ ಎಂದು ತಿಳಿಸಲಾಗಿದೆ.