ಒಡಿಶಾದ ಪುರಿ ಜಗನ್ನಾಥ ದೇವಾಲಯಕ್ಕೆ ಶುಕ್ರವಾರ ಒಂದೇ ದಿನ 28 ಲಕ್ಷ ರೂ. ಕಾಣಿಕೆ ಹರಿದು ಬಂದಿದೆ. ಕಳೆದ 2 ವರ್ಷಗಳಲ್ಲಿ ಒಂದೇ ದಿನ ಸಂಗ್ರಹವಾದ ಅತಿ ಹೆಚ್ಚು ಕಾಣಿಕೆ ಇದಾಗಿದೆ ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.
ಶುಕ್ರವಾರ ದೇವಸ್ಥಾನದಲ್ಲಿನ ಹುಂಡಿಯಲ್ಲಿ ಒಟ್ಟು 28,10,691 ರೂ. ನಗದು, 550 ಮಿ.ಗ್ರಾಂ ಚಿನ್ನ ಮತ್ತು 61. 70 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ಈ ಹಿಂದೆ ಹುಂಡಿಯಲ್ಲಿ ದಿನಕ್ಕೆ 2.5-3 ಲಕ್ಷ ರೂ. ನಗದು ಸಂಗ್ರಹವಾಗುತ್ತಿತ್ತು. ಶುಕ್ರವಾರ ಪುರಿ ಜಗನ್ನಾಥ ದೇವಾಲಯದಲ್ಲಿ ಅನಾಲಾ ನವಮಿ ಆಚರಿಸಲಾಯಿತು. ಈ ಹಿನ್ನೆಲೆ ಹೆಚ್ಚಿನ ಜನರು ದೇವರ ದರ್ಶನಕ್ಕೆ ಬಂದಿದ್ದರು ಎಂದು ಮಂಡಳಿ ತಿಳಿಸಿದೆ.