ಆಸ್ಟ್ರೇಲಿಯಾ: ಆಸ್ಟ್ರೇಲಿಯಾ ಕ್ರಿಕೆಟ್ ನ ಅತ್ಯುತ್ತಮ ವಿಕೆಟ್ ಕೀಪರ್ ಗಳಲ್ಲಿ ಒಬ್ಬರು ಎಂದು ಕರೆಸಿಕೊಂಡಿದ್ದಂತ ಗ್ರೇಟ್ ರಾಡ್ನಿ ಮಾರ್ಷ್ ( 74 ) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಶುಕ್ರವಾರ ರಾತ್ರಿ ಹೃದಯಾಘಾತಕ್ಕೆ ಒಳಗಾಗಿದ್ದರು.
ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಒಂದು ಕಾಲದಲ್ಲಿ ಗ್ರೇಟ್ ಕೀಪರ್, ಅತ್ಯುತ್ತಮ ವಿಕೆಟ್ ಕೀಪರ್ ಎಂದೆಲ್ಲಾ ಕರೆಸಿಕೊಂಡಿದ್ದವರು ಗ್ರೇಟ್ ರಾಡ್ನಿ ಮಾರ್ಷ್ ಆಗಿದ್ದರು.
ಕೋಮಾ ಸ್ಥಿತಿಯನ್ನು ತಲುಪಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಡ್ರಿಲೇಡ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಅವರು, ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಮಾರ್ಷ್ 1984 ರಲ್ಲಿ ನಿವೃತ್ತರಾಗಿದ್ದ ಅವರು, ಮೊದಲು 1970ರಲ್ಲಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. 96 ಟೆಸ್ಟ್ ಮ್ಯಾಚ್ ಗಳನ್ನು ಆಡಿದ್ದ ಅವರು, ಟೆಸ್ಟ್ ಶತಕ ಗಳಿಸಿದ ಮೊದಲ ಆಸ್ಟ್ರೇಲಿಯಾ ವಿಕೆಟ್ ಕೀಪರ್ ಎಂದು ಕರೆಸಿಕೊಂಡಿದ್ದರು. ಇದೀಗ ಅವರು, ನಿಧನರಾಗುವ ಮೂಲಕ, ಇನ್ನಿಲ್ಲವಾಗಿದ್ದಾರೆ.