ನವದೆಹಲಿ: ಜನಪ್ರಿಯ ಮೋಟಿವೇಷನಲ್ ಸ್ಪೀಕರ್ ಮತ್ತು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿರುವ ವಿವೇಕ್ ಬಿಂದ್ರಾ ಮದುವೆಯಾದ ಒಂದೇ ವಾರಕ್ಕೆ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾರೆ.
ಕೌಟುಂಬಿಕ ದೌರ್ಜನ್ಯದ ಆರೋಪದ ಮೇಲೆ ಅವರ ಮೇಲೆ ಕೇಸ್ ದಾಖಲು ಮಾಡಲಾಗುದೆ. ನೋಯ್ಡಾದ ಸೆಕ್ಟರ್ 126ರಲ್ಲಿ ಆತನ ಸೋದರ ಮಾವನಿಂದ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಬಿಂದ್ರಾ ಅವರ ಪತ್ನಿ ಯಾನಿಕಾ ಅವರ ಸಹೋದರ ವೈಭವ್ ಕ್ವಾತ್ರಾ ಅವರು ದೂರು ದಾಖಲಿಸಿದ್ದಾರೆ, ದಂಪತಿಗಳು ವಾಸಿಸುವ ನೋಯ್ಡಾದ ಸೆಕ್ಟರ್ 94 ರ ಸೂಪರ್ನೋವಾ ವೆಸ್ಟ್ ರೆಸಿಡೆನ್ಸಿಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.
ಎಫ್ಐಆರ್ನಲ್ಲಿ ಉಲ್ಲೇಖಿಸಿರುವ ವಿವರಗಳ ಪ್ರಕಾರ, ಬಿಂದ್ರಾ ಮತ್ತು ಯಾನಿಕಾ ಡಿಸೆಂಬರ್ 6 ರಂದು ವಿವಾಹವಾಗಿದ್ದರು. ಆದರೆ, ಮದುವೆಯ ಕೆಲವು ಗಂಟೆಗಳ ನಂತರ, ಬಿಂದ್ರಾ ಯಾನಿಕಾಳನ್ನು ಕೋಣೆಯೊಳಗೆ ಕರೆದೊಯ್ದು, ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.