ಅಹಮದಾಬಾದ್: ಸೌರಯಾನ ಆದಿತ್ಯ ಮಿಷನ್ ಕುರಿತು ಇಸ್ರೋ ಮಹತ್ವದ ಅಪ್ ಡೇಟ್ ನೀಡಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಹತ್ವಾಂಕ್ಷೆ ಯೋಜನೆ ಸೌರ ಮಿಷನ್ ಆದಿತ್ಯ-ಎಲ್ 1 ಜನವರಿ 6ರಂದು ಉದ್ದೇಶಿತ ಕಕ್ಷೆಗೆ ತಲುಪಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ. ಆದಿತ್ಯ-ಎಲ್ 1 ಜನವರಿ 6ರಂದು ಎಲ್ 1 ಪಾಯಿಂಟ್ಗೆ ಪ್ರವೇಶಿಸಲಿದೆ ಎಂದು ಹೇಳಿದ್ದಾರೆ.
ಆದಿತ್ಯ-ಎಲ್ 1 ಮಿಷನ್ ತನ್ನ ಉದ್ದೇಶಿತ ಕಕ್ಷೆಗೆ ತಲುಪಿದ ನಂತರ ಮಿಷನ್ನ ಇಂಜಿನ್ಗಳು ಸೂರ್ಯನ ಶಾಖಕ್ಕೆ ಬೆಂದು ಅಥವಾ ಮೆಲ್ಟ್ ಆಗುವ ಹಂತಕ್ಕೆ ಹೋಗಬಹುದು. ಅದರೂ ಇದು ಕಾರ್ಯನಿರ್ವಹಿಸಲಿದೆ. ಇನ್ನು ಆದಿತ್ಯ-ಎಲ್ 1 ತನ್ನ ಗಮ್ಯಸ್ಥಾನಕ್ಕೆ ತಲುಪುವ ಮುನ್ನ ಸೂರ್ಯನ ಸುತ್ತಲೂ ತಿರುಗಿ ಎಲ್ 1 ಪಾಯಿಂಟ್ನ್ನು ತಲುಪಲಿದೆ.
ಆದಿತ್ಯ-ಎಲ್1 ತನ್ನ ಗಮ್ಯಸ್ಥಾನವನ್ನು ತಲುಪಿದ ನಂತರ ಮುಂದಿನ 5 ವರ್ಷಗಳ ಕಾಲ ಸೂರ್ಯನ ಸುತ್ತ ನಡೆಯುವ ಘಟನೆಗಳನ್ನು ಹಾಗೂ ಬದಲಾವಣೆಗಳನ್ನು ಅಧ್ಯಯನ ಮಾಡಿ ನಮಗೆ ಮಾಹಿತಿ ನೀಡಿತ್ತದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ಸೂಚನೆಯಂತೆ ಅಮೃತ್ ಕಾಲ್ ಸಮಯದ ವೇಳೆಗೆ ಭಾರತವು ತನ್ನದೇ ಆದ ‘ಭಾರತ್ ಬಾಹ್ಯಾಕಾಶ ನಿಲ್ದಾಣ’ವನ್ನು ಹೊಂದಲಿದೆ ಎಂದು ಅಧ್ಯಕ್ಷ ಎಸ್ ಸೋಮನಾಥ್ ವಿವರಿಸಿದ್ದಾರೆ.