ಮುಂಬೈ: ಬಿಗ್ ಬಾಸ್ ಹಿಂದಿ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದ ಉರ್ಫಿ ಜಾವೇದ್ ಇತ್ತೀಚಿನ ದಿನಗಳಲ್ಲಿ ಕಲ್ಪನೆಗೂ ಮೀರಿದ ರೀತಿಯಲ್ಲಿ ಡ್ರೆಸ್ ಡಿಸೈನ್ ಮಾಡುತ್ತಿದ್ದಾರೆ. ಇದನ್ನು ಕಂಡು ಕಿಡಿಕಾರುವವರೇ ಹೆಚ್ಚು. ಇನ್ನು ಉರ್ಫಿ ಮತ್ತು ಸಹೋದರಿ ಹಾಗೆ ಸುಮ್ಮನೆ ಲೋಖಂಡವಾಲಾದಲ್ಲಿ ಕಾಫಿ ಕುಡಿಯಲು ಹೋದಾಗ ಮಹಿಳಾ ಪೊಲೀಸರು ಬಂದು ಅರೆಸ್ಟ್ ಮಾಡಿದ್ದಾರೆ.
ಸುಮ್ಮನೆ ಕುಳಿತಿದ್ದ ಉರ್ಫಿಯನ್ನು ಕರೆದು ತಕ್ಷಣವೇ ಪೊಲೀಸ್ ಜೀಪ್ ಹತ್ತಲು ಹೇಳಿದ್ದಾರೆ. ನಾನು ಯಾಕೆ ಬರಬೇಕು ನಾನು ಏನು ಮಾಡಿದೆ ಎಂದು ಉರ್ಫಿ ಪ್ರಶ್ನೆ ಮಾಡಿದಾಗ ಯಾರು ಇಷ್ಟು ಚಿಕ್ಕ ಬಟ್ಟೆಯನ್ನು ಹಾಕಿಕೊಂಡು ಹೊರ ಬರುತ್ತಾರೆ ಎಂದು ಮಹಿಳಾ ಪೇದೆ ಉತ್ತರಿಸುತ್ತಾರೆ. ಇಬ್ಬರು ಮಹಿಳಾ ಪೇದೆಗಳು ಉರ್ಫಿ ಕೈ ಹಿಡಿದುಕೊಂಡು ಜೀಪ್ನಲ್ಲಿ ಲೋಖಂಡವಾಲಾ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುತ್ತಾರೆ.
ಈ ಎಲ್ಲಾ ಆಕ್ಷನ್ ಮತ್ತು ರಿಯಾಕ್ಷನ್ ಲೆಕ್ಕಾಚಾರ ಮಾಡಿ ನೋಡಿದರೆ ಇದು ಪ್ರ್ಯಾಂಕ್ ಅನಿಸುತ್ತದೆ. ಆದರೆ ಮಾಹಿಳಾ ಪೊಲೀಸರು ಖಡಕ್ ಅಗಿ ಬಂದಿರುವುದನ್ನು ನೋಡಿದರೆ ಮತ್ತೊಮ್ಮೆ ಉರ್ಫಿ ವಿರುದ್ಧ ಕಂಪ್ಲೇಂಟ್ ಆಗಿರಬಹುದು ಎನ್ನಲಾಗ್ತಿದೆ. ಇನ್ನು ನೆಟ್ಟಿಗರು ಇದೊಂದು ಸ್ಕ್ರಿಪ್ಟೆಡ್, ಪಬ್ಲಿಸಿಟಿಗಾಗಿ ಹೀಗೆ ಮಾಡಲಾಗಿದೆ ಎಂದಿದ್ದಾರೆ. ಈ ಹಿಂದೆ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಉರ್ಫಿ ವಿರುದ್ಧ ವಕೀಲರು ದೂರು ನೀಡಿದ್ದರು. ಆಗ ಜನರ ಸಪೋರ್ಟ್ನಿಂದ ಉರ್ಫಿ ಯಾವ ತೊಂದರೆ ಇಲ್ಲದೆ ಬಂದಿದ್ದರು.
https://www.instagram.com/reel/CzKv_9RIhoP/?utm_source=ig_embed&utm_campaign=loading