ವಾಷಿಂಗ್ಟನ್: ಇಂಡಿಯಾನಾ ರಾಜ್ಯದ ಜಿಮ್ನಲ್ಲಿ 24 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬನಿಗೆ ಚೂರಿ ಇರಿದ ಘಟನೆ ವಿಚಲಿತರಾಗುವಂತೆ ಮಾಡಿದೆ. ಅಲ್ಲದೆ ಪ್ರಸ್ತುತ ಸ್ಥಿತಿ ಗಂಭೀರವಾಗಿದೆ ಎಂದು ಯುಎಸ್ ಹೇಳಿದೆ.
ವರುಣ್ ರಾಜ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಅಮೆರಿಕ ಹಾರೈಸಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರರು ತಿಳಿಸಿದ್ದಾರೆ. ಘಟನೆಯ ಬಳಿಕ ದಾಳಿಕೋರ ಆಂಡ್ರೇಡ್ ಅನ್ನು ಬಂಧಿಸಲಾಗಿದೆ. ಜೊತೆಗೆ ದಾಳಿಗೆ ಬಳಸಿದ ಆಯುಧಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಲಾಗುತ್ತಿದೆ.
ಘಟನೆ ಸಂಬಂಧ ಸ್ಟೇಟ್ ಡಿಪಾರ್ಟ್ ಮೆಂಟ್ ವಕ್ತಾರರು ಪ್ರತಿಕ್ರಿಯಿಸಿ, ಭಾರತೀಯ ಪದವೀಧರ ವಿದ್ಯಾರ್ಥಿ ವರುಣ್ ರಾಜ್ ವಿರುದ್ಧದ ಕ್ರೂರ ದಾಳಿಯ ವರದಿಗಳಿಂದ ನಾವು ತೀವ್ರವಾಗಿ ವಿಚಲಿತರಾಗಿದ್ದೇವೆ. ಅವರು ಆದಷ್ಟು ಬೇಗ ಸಂಪೂರ್ಣ ಚೇತರಿಸಿಕೊಳ್ಳುವಂತಾಗಲಿ ಎಂದು ನಾವು ಬಯಸುತ್ತೇವೆ ತಿಳಿಸಿದ್ದಾರೆ.