News Karnataka Kannada
Saturday, May 04 2024
ಮಂಗಳೂರು

ಹುಡುಗಿ ಸುತ್ತಾಟಕ್ಕೆ ಬಂದಿಲ್ಲವೆಂದು ಯುವಕನಿಂದ ಪಿಜಿ ಹಾಸ್ಟೆಲ್ ಗೆ ಕಲ್ಲು ತೂರಾಟ

Crmeeee
Photo Credit : News Kannada

ಮಂಗಳೂರು: ಪ್ರೀತಿಸುತ್ತಿದ್ದ ಹುಡುಗಿ ಜೊತೆಗೆ ಸುತ್ತಾಟಡಲು ಬಂದಿಲ್ಲವೆಂದು ಯುವಕನೊಬ್ಬ ಪಿಜಿ ಹಾಸ್ಟೆಲ್ ಕಟ್ಟಡಕ್ಕೆ ಕಲ್ಲೆಸೆದು ಹಾನಿಗೊಳಿಸಿದ ಘಟನೆ ನಗರದ ಆಗ್ನೆಸ್ ಕಾಲೇಜು ಬಳಿ ಗುರುವಾರ ರಾತ್ರಿ ನಡೆದಿದೆ.

ಪ್ರೀತಿಸುತ್ತಿದ್ದ ಹುಡುಗಿ ಜೊತೆಗೆ ಸುತ್ತಾಟಡಲು ಬಂದಿಲ್ಲವೆಂದು ಯುವಕನೊಬ್ಬ ಪಿಜಿ ಹಾಸ್ಟೆಲ್ ಕಟ್ಟಡಕ್ಕೆ ಕಲ್ಲೆಸೆದು ಹಾನಿಗೊಳಿಸಿದ ಘಟನೆ ನಗರದ ಆಗ್ನೆಸ್ ಕಾಲೇಜು ಬಳಿ ಗುರುವಾರ ರಾತ್ರಿ ನಡೆದಿದೆ.

ಸುಳ್ಯ ಮೂಲದ ವಿವೇಕ್ (18) ಎಂಬ ಯುವಕ ಕೃತ್ಯ ಎಸಗಿದ್ದು ಸ್ಥಳೀಯರು ಹಿಡಿದು ಆತನಿಗೆ ಥಳಿಸಿದ್ದಾರೆ. ಈತ ಮಂಗಳೂರಿನಲ್ಲಿ ಲೈಟಿಂಗ್ ಕೆಲಸ ಮಾಡುತ್ತಿದ್ದು ಆಗ್ನೆಸ್ ಬಳಿಯ ವಿದ್ಯಾರ್ಥಿನಿಯರ ಪಿಜಿ ಹಾಸ್ಟೆಲ್ ನಲ್ಲಿ ಕೆಲಸಕ್ಕಿದ್ದ ಯುವತಿಯ ಜೊತೆಗೆ ಪ್ರೀತಿ ಹೊಂದಿದ್ದ. ಗುರುವಾರ ಸಂಜೆ ಆಕೆಗೆ ಫೋನ್ ಮಾಡಿ, ಹೊರಗೆ ಸುತ್ತಾಡಲು ಬರುವಂತೆ ಕೇಳಿಕೊಂಡಿದ್ದ.

ಆದರೆ ಯುವತಿ ನಿನ್ನ ಜೊತೆಗೆ ಬರುವುದಿಲ್ಲ ಎಂದು ಹೇಳಿ ನಿರಾಕರಣೆ ಮಾಡಿದ್ದಳು. ಪದೇ ಪದೇ ಕರೆ ಮಾಡಿದರೂ ಕೆಲಸ ಇದೆಯೆಂದು ಹೇಳಿ ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದ ಯುವಕ ಪಿಜಿ ಹಾಸ್ಟೆಲ್ ಮೇಲೆ ಕಲ್ಲು ತೂರಿದ್ದಾನೆ. ಹಾಸ್ಟೆಲ್ ಕಿಟಕಿ, ಗಾಜು ಒಡೆದು ಹೋಗಿದ್ದು ದಾಂಧಲೆಗೆ ಯತ್ನಿಸಿದ ಯುವಕನನ್ನು ಕೂಡಲೇ ಸ್ಥಳೀಯರು ಹಿಡಿದು ಥಳಿಸಿದ್ದಾರೆ. ರಾತ್ರಿ ಹತ್ತು ಗಂಟೆ ವೇಳೆಗೆ ಯುವಕನನ್ನು ಹಿಡಿದು ಥಳಿಸಿ ಕೂಡಿಹಾಕಿದ್ದರು. ಬಳಿಕ ಕದ್ರಿ ಪೊಲೀಸರನ್ನು ಕರೆಸಿ ಅವರ ವಶಕ್ಕೆ ಒಪ್ಪಿಸಿದ್ದಾರೆ. ಯುವಕನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಕುಡಿದ ಮತ್ತಿ‌ನಲ್ಲಿ ಕಲ್ಲು ತೂರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು