News Karnataka Kannada
Friday, May 03 2024
ಮಹಾರಾಷ್ಟ್ರ

ಸಮೀರ್ ವಾಂಖೆಡೆ ಮಾಲಿಕತ್ವದ ಹೋಟೆಲ್ ಹಾಗೂ ಬಾರ್ ಪರವಾನಗಿ ರದ್ದು

Sameer Vankhede
Photo Credit :

ಮುಂಬೈ : ಮುಂಬೈ ವಿಭಾಗದ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ ನ ಮಾಜಿ ಪ್ರಾದೇಶಿಕ ನಿರ್ದೇಶಕ ಸಮೀರ್ ವಾಂಖೆಡೆ ಮಾಲಿಕತ್ವದ ಮುಂಬೈ ಮೂಲದ ಹೋಟೆಲ್ ಹಾಗೂ ಬಾರ್ ಪರವಾನಗಿಯನ್ನು ರದ್ದುಗೊಳಿಸಲಾಗಿದೆ.

ಈ ಪರವಾನಗಿಯನ್ನು ತಪ್ಪು ಮಾಹಿತಿ ಹಾಗೂ ವಂಚನೆಯ ಮೂಲಕ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ರಾಜೇಶ್ ನರ್ವೆಕರ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ಬಾರ್ ನ್ನು ಸೀಲ್ ಮಾಡಿ ವಶಕ್ಕೆ ಪಡೆಯಲಾಗುತ್ತದೆ ಎಂದು ಹೇಳಿದ್ದಾರೆ.

ಸಮೀರ್ ವಾಂಖೆಡೆ ನವಿ ಮುಂಬೈ ನ ವಶಿಯಲ್ಲಿ ಪರ್ಮಿಟ್ ರೂಮ್ ಹಾಗೂ ಬಾರ್ ಗಾಗಿ ಪರವಾನಗಿಯನ್ನು ಪಡೆದಿದ್ದರು. ಇದಕ್ಕೆ 1997 ರಲ್ಲಿ ಪರವಾನಗಿ ಪಡೆಯಲಾಗಿದ್ದು, ಆಗ ವಾಂಖೆಡೆ ಅಪ್ರಾಪ್ತರಾಗಿದ್ದರು. ಆದ್ದರಿಂದ ಇದು ಅಕ್ರಮವಾಗಿದೆ ಎಂದು ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ನವಾಬ್ ಮಲೀಕ್ ನವೆಂಬರ್ ನಲ್ಲಿ ತಿಳಿಸಿದ್ದರು.

ಸರ್ಕಾರಿ ಉದ್ಯೋಗದಲಿದ್ದರೂ ವಾಂಖೆಡೆ ಪರ್ಮಿಟ್ ರೂಮ್ ನಡೆಸಲು ಲೈಸೆನ್ಸ್ ನ್ನು ಪಡೆದಿರುವುದು ಸೇವೆಯ ನಿಯಮಗಳಿಗೆ ವಿರುದ್ಧವಾದದ್ದು ಎಂದು ಮಲೀಕ್ ಹೇಳಿದ್ದರು. ವಾಂಖೆಡೆ ಈ ಬಳಿಕ ಸಚಿವರ ಹೇಳಿಕೆಗಳನ್ನು ಅಲ್ಲಗಳೆದಿದ್ದರು.

ಈ ಬೆನ್ನಲ್ಲೇ ರಾಜ್ಯ ಅಬಕಾರಿ ಇಲಾಖೆ ವಾಂಖೆಡೆ ಅವರಿಗೆ ನೊಟೀಸ್ ಜಾರಿಗೊಳಿಸಿತ್ತು. ನೊಟೀಸ್ ಗೆ ನೀಡಲಾಗಿದ್ದ ಪ್ರತಿಕ್ರಿಯೆ ಹಾಗೂ ಪರಿಶೀಲನೆಯ ಬಳಿಕ ಜಿಲ್ಲಾಧಿಕಾರಿಗಳು ವಾಂಖೆಡೆ ಅವರು 18 ವರ್ಷಕ್ಕಿಂತ ಮೊದಲೇ ಪರವಾನಗಿ ಪಡೆದಿದ್ದಾರೆ. ಬಾರ್ ನಡೆಸುವುದಕ್ಕೆ ಪರವಾನಗಿ ಪಡೆಯಲು 21 ವರ್ಷಗಳಾಗಿರಬೇಕು ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿ ಪಡೆಯಲಾಗಿದ್ದ ಪರವಾನಗಿಯನ್ನು ರದ್ದುಗೊಳಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು