News Karnataka Kannada
Wednesday, May 01 2024
ಮಹಾರಾಷ್ಟ್ರ

ಲತಾ ಮಂಗೇಶ್ಕರ್​ ಆರೋಗ್ಯದ ಬಗ್ಗೆ ತಪ್ಪು ಮಾಹಿತಿ ಹರಡಬೇಡಿ; ಅವರ ಪರ ವಕ್ತಾರರು

Latha Mangeshkar
Photo Credit :

ಮುಂಬೈ : ‘ಲತಾ ಮಂಗೇಶ್ಕರ್​ ಅವರ ಆರೋಗ್ಯ ಹದಗೆಡುತ್ತಿದೆ ಎಂಬ ಸುದ್ದಿ ನಿಜಕ್ಕೂ ಬೇಸರ ತರಿಸುವಂಥದ್ದು. ಯಾಕೆಂದರೆ ಅದು ನಿಜವಲ್ಲ’ ಎಂದು ಗಾಯಕಿ ಪರ ವಕ್ತಾರರು ತಿಳಿಸಿದ್ದಾರೆ

ಖ್ಯಾತ ಗಾಯಕಿ ಲತಾ ಮಂಗೇಶ್ಕರ್​  ಅವರು ಕೊವಿಡ್​ ಸೋಂಕಿಗೆ ಒಳಗಾಗಿರುವುದು ಅವರ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ. ಸದ್ಯ ಲತಾ ಮಂಗೇಶ್ಕರ್​ ಅವರಿಗೆ 92 ವರ್ಷ ವಯಸ್ಸು.

ಹಾಗಾಗಿ ಸಹಜವಾಗಿಯೇ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಹಲವು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲತಾ ಮಂಗೇಶ್ಕರ್​ ಹೆಲ್​ ಅಪ್​ಡೇಟ್​  ಕುರಿತು ಕುಟುಂಬದವರು ಮತ್ತು ವೈದ್ಯರು ಆಗಾಗ ಮಾಹಿತಿ ನೀಡುತ್ತಲೇ ಇದ್ದಾರೆ. ಅದರ ನಡುವೆಯೂ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದು ಕುಟುಂಬದವರಿಗೆ ತಲೆಬಿಸಿ ತಂದೊಡ್ಡಿದೆ. ಸೆಲೆಬ್ರಿಟಿಗಳ ಕುರಿತಂತೆ ಸುಳ್ಳು ಸುದ್ದಿ ಹರಡಿಸುವ ಕೆಟ್ಟ ಛಾಳಿ ಇತ್ತೀಚೆಗೆ ಜಾಸ್ತಿ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಇಂಥ ಕೆಲಸ ಮಾಡುತ್ತಾರೆ. ದಯವಿಟ್ಟು ಯಾರೂ ಕೂಡ ಲತಾ ಮಂಗೇಶ್ಕರ್​ ಆರೋಗ್ಯದ ಬಗ್ಗೆ ತಪ್ಪು ಮಾಹಿತಿ ಹರಡಬೇಡಿ ಎಂದು ಅವರ ಪರ ವಕ್ತಾರರು ತಿಳಿಸಿದ್ದಾರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಒಂದು ವಾರದ ಹಿಂದೆ ಲತಾ ಮಂಗೇಶ್ಕರ್​ ಅವರಿಗೆ ಕೊವಿಡ್​ ಲಕ್ಷಣಗಳು ಕಾಣಿಸಿಕೊಂಡವು. ಕೊರೊನಾ ಜೊತೆಗೆ ನ್ಯುಮೋನಿಯಾ ಕೂಡ ಆಗಿರುವುದರಿಂದ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊವಿಡ್​ ಇರುವ ಕಾರಣ ಅವರನ್ನು ಭೇಟಿ ಮಾಡಲು ಕುಟುಂಬವರಿಗೂ ಅನುಮತಿ ನೀಡಿರಲಿಲ್ಲ. ವೈದ್ಯರ ತಂಡ ನಿರಂತರವಾಗಿ ಲತಾ ಮಂಗೇಶ್ಕರ್​ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಆದರೆ ಅವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂದು ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಆ ಕುರಿತು ಲತಾ ಮಂಗೇಶ್ಕರ್​ ಪರ ವಕ್ತಾರರು ಅಸಮಾಧನ ವ್ಯಕ್ತಪಡಿಸಿದ್ದಾರೆ.

‘ಲತಾ ಅವರ ಆರೋಗ್ಯ ಹದಗೆಡುತ್ತಿದೆ ಎಂಬ ಸುದ್ದಿ ನಿಜಕ್ಕೂ ಬೇಸರ ತರಿಸುವಂಥದ್ದು. ಯಾಕೆಂದರೆ ಅದು ನಿಜವಲ್ಲ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ. ಆದಷ್ಟು ಬೇಗ ಅವರು ಗುಣಮುಖರಾಗಿ ಮನೆಗೆ ಮರಳಲಿ ಅಂತ ಎಲ್ಲರೂ ಪ್ರಾರ್ಥಿಸಿ’ ಎಂದು ವಕ್ತಾರರು ಹೇಳಿದ್ದಾರೆ. ಲತಾ ಬೇಗ ಚೇತರಿಸಿಕೊಳ್ಳಲಿ ಎಂದು ಅನೇಕ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಕುಟುಂಬದವರು ಕೂಡ ವಿಶೇಷ ಪೂಜೆ ನಡೆಸುತ್ತಿದ್ದಾರೆ.

ಲತಾ ಮಂಗೇಶ್ಕರ್​ ಆರೋಗ್ಯದ ಕುರಿತಂತೆ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್​ ಟೋಪೆ ಅವರು ಭಾನುವಾರ (ಜ.16) ಹೇಳಿಕೆ ನೀಡಿದ್ದಾರೆ. ‘ಲತಾ ಅವರ ಆರೋಗ್ಯ ಸುಧಾರಿಸುತ್ತಿದೆ. ಆಸ್ಪತ್ರೆಯ ಆಡಳಿತ ವರ್ಗದವರ ಜೊತೆ ನಾನು ಮಾತನಾಡಿದ್ದೇನೆ. ಜನರು ಹೆಲ್ತ್​ ಅಪ್​ಡೇಟ್​ ತಿಳಿಯಲು ಕಾಯುತ್ತ ಇರುತ್ತಾರೆ. ಹಾಗಾಗಿ ಆಸ್ಪತ್ರೆಯ ವಕ್ತಾರರು ಅಪ್​ಡೇಟ್​ ನೀಡುತ್ತಾ ಇರಬೇಕು ಅಂತ ಸೂಚಿಸಿದ್ದೇನೆ’ ಎಂದು ರಾಜೇಶ್​ ಟೋಪೆ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು