News Karnataka Kannada
Wednesday, May 01 2024
ಮಂಗಳೂರು

ಮಂಗಳೂರು: ಮನೆ ಬಾಡಿಗೆ ವಿಚಾರದಲ್ಲಿ ಮದ್ಯಸ್ಥಿಕೆ ಹಿನ್ನಲೆ, ಯುವಕನ ಮೇಲೆ ಮಾರಣಾಂತಿಕ ಹಲ್ಲೆ‌

Crime
Photo Credit : News Kannada

ಮಂಗಳೂರು : ಕೃಷ್ಣಾಪುರದಲ್ಲಿ ಯುವಕನೊಬ್ಬನ ಮೇಲೆ ನಾಲ್ಕರಿಂದ ಐದು ಮಂದಿಯ ಗುಂಪೊಂದು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ರಾತ್ರಿ 12:00 ಗಂಟೆ ಸುಮಾರಿಗೆ ನಡೆದಿದೆ.

ಮೊಹಮ್ಮದ್ ಅನಾಸ್ ಎಂಬ 29 ವರ್ಷದ ಯುವಕನ ಮೇಲೆ 4-5 ಮಂದಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ಎಲ್ಲಾ ಆರೋಪಿಗಳನ್ನು ಗುರುತಿಸಲಾಗಿದ್ದು, ಹೆಲ್ಲೆಗೊಳಗಾದ ಯುವಕ ಮತ್ತು ಹಲ್ಲೆ ನಡೆಸಿದವರು ಒಂದೇ ಸಮುದಾಯದವರಾಗಿದ್ದಾರೆ. ಚಾರು, ರವೂಫ್, ಅಕ್ಕಿ ಮುಸ್ತಫಾ ಮತ್ತು ಇನ್ನೊಬ್ಬ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಹೇಳಿಕೊಳ್ಳಲಾಗಿದೆ.

ಹಲ್ಲೆಗೊಳಗಾದ ಅನಾಸ್ ಅವರು ಚಾರು, ರವೂಫ್ ವಾಸವಿದ್ದ ಬಾಡಿಗೆ ಮನೆ ತೆರವು ಮಾಡಿಸುವಲ್ಲಿ ಮಧ್ಯಸ್ಥಿಕೆ ವಹಿಸಿದ್ದು, ಇದೆ ಸೇಡಿನಲ್ಲಿ ದಾಳಿ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಗಂಭೀರವಾಗಿ ಗಾಯಗೊಂಡಿರುವ ಅನಾಸ್ ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು