News Karnataka Kannada
Saturday, April 27 2024
ಮಹಾರಾಷ್ಟ್ರ

ಮುಂಬೈ: ಮನ್‌ಖುರ್ದ್‌ನ ಸ್ಕ್ರ್ಯಾಪ್ ಮಾರುಕಟ್ಟೆಯಲ್ಲಿ ಬಾರಿ ಬೆಂಕಿ

Fire Iran 13072021
Photo Credit :

ಮುಂಬೈ: ಮುಂಬೈನ ಮನ್‌ಖುರ್ದ್ ಪ್ರದೇಶದ ಮಂಡಲ ಸ್ಕ್ರ್ಯಾಪ್ ಮಾರ್ಕೆಟ್ ಗೋಡೌನ್‌ಗಳಲ್ಲಿ ಶುಕ್ರವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಟ್ಟು 12 ಅಗ್ನಿಶಾಮಕ ವಾಹನಗಳು, 10 ಟ್ಯಾಂಕರ್‌ಗಳು ಹಾಗೂ 150 ಅಗ್ನಿಶಾಮಕ ಸಿಬ್ಬಂದಿಯನ್ನು ಬೆಂಕಿ ನಂದಿಸುವ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.ಘಟನೆಯಲ್ಲಿ ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

“ಬೆಳಿಗ್ಗೆ 3:00 ಗಂಟೆ ಸುಮಾರಿಗೆ ನಮಗೆ ಬೆಂಕಿಯ ಬಗ್ಗೆ ಮಾಹಿತಿ ಸಿಕ್ಕಿತು. 12 ಅಗ್ನಿಶಾಮಕ ಇಂಜಿನ್‌ಗಳು, 10 ಟ್ಯಾಂಕರ್‌ಗಳು ಮತ್ತು 150 ಅಗ್ನಿಶಾಮಕ ಸಿಬ್ಬಂದಿಯನ್ನು ಅಗ್ನಿಶಾಮಕ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಯಾವುದೇ ಅನಾಹುತ ವರದಿಯಾಗಿಲ್ಲ” ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಈ ನಿಟ್ಟಿನಲ್ಲಿ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು