News Karnataka Kannada
Monday, May 06 2024
ಉತ್ತರ ಪ್ರದೇಶ

ಕಾನ್ಪುರದ ನಂತರ, ಝಿಕಾ ವೈರಸ್ ಲಕ್ನೋ ದಲ್ಲಿ ಪತ್ತೆ 2 ಪ್ರಕರಣಗಳು ವರದಿ

Zika Virus 01082021
Photo Credit :

ಲಕ್ನೋ: ಝಿಕಾ ವೈರಸ್ ಉತ್ತರ ಪ್ರದೇಶದ ಲಕ್ನೋ ಜಿಲ್ಲೆಗೆ ಕಾಲಿಟ್ಟಿದ್ದು, ಗುರುವಾರ ಎರಡು ಪ್ರಕರಣಗಳು ವರದಿಯಾಗಿವೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಇಂಡಿಯಾ ಟುಡೇಗೆ ದೃಢಪಡಿಸಿದ್ದಾರೆ.

ಲಕ್ನೋದ ಹುಸೈಂಗಂಜ್ ಮತ್ತು ಎಲ್‌ಡಿಎ ಕಾಲೋನಿ ಪ್ರದೇಶಗಳಲ್ಲಿ ತಲಾ ಒಂದು ಪಾಸಿಟಿವ್ ಝಿಕಾ ಪ್ರಕರಣ ಪತ್ತೆಯಾಗಿದೆ ಎಂದು ಯುಪಿ ಸರ್ಕಾರದ ವೈದ್ಯಕೀಯ ಮತ್ತು ಆರೋಗ್ಯ ಮಹಾನಿರ್ದೇಶಕ ಡಾ.ವೇದ್ ವ್ರತ್ ಸಿಂಗ್ ಹೇಳಿದ್ದಾರೆ.

ಯುಪಿಯ ಕಾನ್ಪುರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಝಿಕಾ ಪ್ರಕರಣಗಳ ಹಿನ್ನೆಲೆಯಲ್ಲಿ ಲಕ್ನೋದಲ್ಲಿ ಎರಡು ಪ್ರಕರಣಗಳು ಬಂದಿವೆ.
ಕಳೆದ ಒಂದು ತಿಂಗಳಲ್ಲಿ ಕಾನ್ಪುರದಲ್ಲಿ 105 ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 17 ಜನರು ಚೇತರಿಸಿಕೊಂಡಿದ್ದಾರೆ.ಜಿಲ್ಲೆಯಲ್ಲಿ ಪ್ರಸ್ತುತ 88 ಸಕ್ರಿಯ ಪ್ರಕರಣಗಳಿವೆ ಎಂದು ವರದಿಯಾಗಿದೆ.

ಹೆಚ್ಚುತ್ತಿರುವ ಜಿಕಾ ವೈರಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಬುಧವಾರ ಕಾನ್ಪುರಕ್ಕೆ ಭೇಟಿ ನೀಡಿ ಆರೋಗ್ಯ ಅಧಿಕಾರಿಗಳು ಮತ್ತು ಜಿಲ್ಲಾಡಳಿತದೊಂದಿಗೆ ಪರಿಶೀಲನಾ ಸಭೆ ನಡೆಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು