ಮುಂಬೈ : ಕೋವಿಡ್ ಸೋಂಕು ಕಡಿಮೆಯಾದ ಹಿನ್ನಲೆ ಮಾಸ್ಕ್ ಕಡ್ಡಾಯ ನಿಯಮವನ್ನು ಸಡಿಲಗೊಳಿಸಿದ ಮುಂಬೈನಲ್ಲಿ ಕೋವಿಡ್ ಹೊಸ ತಳಿ ಪತ್ತೆಯಾಗಿದೆ. ಈ ಕೋವಿಡ್ ಎಕ್ಸ್ಇ ರೂಪಾಂತರ ತಳಿ ಮೊದಲು ಬ್ರಿಟನ್ ನಲ್ಲಿ ಪತ್ತೆಯಾಗಿತ್ತು. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಪ್ರಕಾರ ಕಪ್ಪ ತಳಿ ಪತ್ತೆಯಾಗಿದ್ದು, ಸೋಂಕು ಪತ್ತೆಯಾದ ವ್ಯಕ್ತಿಯಲ್ಲಿ ಯಾವುದೇ ಗಂಭೀರ ಗುಣಲಕ್ಷಣ ಕಾಣಿಸಿಕೊಂಡಿಲ್ಲ ಎಂದು ತಿಳಿಸಲಾಗಿದೆ.
ಇನ್ನು ಈ ಹೊಸ ತಳಿಯು ಕೋವಿಡ್ ಗಿಂತ ಹೆಚ್ಚಾಗಿ ಹರಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆ ತಿಳಿಸಿತು.
ಎಕ್ಸ್ಇ BA1 ಮತ್ತು BA2 ಓಮಿಕ್ರಾನ್ ತಳಿಗಳ ರೂಪಾಂತರವಾಗಿದೆ. ಮುಂಬೈನ ಸೆರೋ ಸಮೀಕ್ಷೆಗೆ ಕಳುಹಿಸಲಾದ 230 ಮಾದರಿಗಳಲ್ಲಿ 21 ಅನ್ನು ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತ ವ್ಯಕ್ತಿಗೆ ಆಮ್ಲಜನಕದ ಬೆಂಬಲ ಅಥವಾ ತೀವ್ರ ನಿಗಾ ಅಗತ್ಯವಿಲ್ಲ ಎಂದು ವರದಿ ಹೇಳಿದೆ.
ಸೋಂಕು ಪತ್ತೆಯಾದ ವ್ಯಕ್ತಿ 50 ವರ್ಷ ವಯಸ್ಸಿನವರಾಗಿದ್ದು, ಎರಡು ಡೋಸ್ ಲಸಿಕೆ ಪಡೆದಿದ್ದರು. ಇವರು 50 ವರ್ಷ ದಕ್ಷಿಣ ಆಫ್ರಿಕಾದಿಂದ ಮರಳಿದ್ದರು ಎಂದು ಬಿಎಂಸಿ ತಿಳಿಸಿದೆ.
ಒಮಿಕ್ರಾನ್ ನ BA.2 ಉಪ-ವ್ಯತ್ಯಯಕ್ಕಿಂತ ಹೊಸ ರೂಪಾಂತರ ಎಕ್ಸ್ಇ 10 ಪ್ರತಿಶತ ಹೆಚ್ಚು ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.