News Karnataka Kannada
Tuesday, May 07 2024
ಮಹಾರಾಷ್ಟ್ರ

ಪ್ರೇಮ ನಿವೇದನೆ ತಿರಸ್ಕರಿಸಿದ ಯುವತಿ ಮೇಲೆ ಆಸಿಡ್ ದಾಳಿ

Acid Attack
Photo Credit :

ಥಾಣೆ: ತನ್ನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ ಯುವತಿ ಮೇಲೆ ಆಸಿಡ್ ಎರಚಿದ ಆರೋಪದ ಮೇರೆಗೆ ಭಗ್ನ ಪ್ರೇಮಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಈ ವ್ಯಕ್ತಿ ಡಿಸೆಂಬರ್ 22ರಂದು ಆಕೆಯ ಮೇಲೆ ಆಸಿಡ್ ದಾಳಿಗೆ ಪ್ರಯತ್ನಿಸಿದ್ದು, ಆ ಮಹಿಳೆ ಗಾಯಗೊಳ್ಳದೆ ಪಾರಾಗಿದ್ದಾಳೆ.

ಥಾಣೆ ಜಿಲ್ಲೆಯ ಭಿವಂಡಿ ಪಟ್ಟಣದಲ್ಲಿ ಕಲ್ಲು ಒಡೆಯುವ ಕೆಲಸ ಮಾಡುವ ಮೊಹಮ್ಮದ್ ಇಕ್ಬಾಲ್ ಸಿಕಂದರ್ ಅನ್ಸಾರಿ ಎಂಬಾತ ಆರೋಪಿಯಾಗಿದ್ದು, ಈತ 20 ವರ್ಷ ವಯಸ್ಸಿನ  ಯುವತಿಯನ್ನು ಪ್ರೀತಿಸುತ್ತಿದ್ದ.

ಆದರೆ, ಆಕೆ ಇವನ ಭಾವನೆಗಳಿಗೆ ಸ್ಪಂದಿಸಿರಲಿಲ್ಲ ಎಂದು ಶಾಂತಿನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.ಇದರಿಂದ ಆಕ್ರೋಶಗೊಂಡಿದ್ದ ಈ ವ್ಯಕ್ತಿ ಡಿಸೆಂಬರ್ 22ರಂದು ಆಕೆಯ ಮೇಲೆ ಆಸಿಡ್ ದಾಳಿಗೆ ಪ್ರಯತ್ನಿಸಿದ್ದು, ಆ ಮಹಿಳೆ ಗಾಯಗೊಳ್ಳದೆ ಪಾರಾಗಿದ್ದಾಳೆ.

ಜೊತೆಗೆ ಆಪಾದಿತನು ಈ ಮಹಿಳೆಯ ತಂದೆಯನ್ನು ನಿಂದಿಸಿ ಅವರ ಸ್ಕೂಟರನ್ನು ಜಖಂಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಮಹಿಳೆಯ ತಂದೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು