News Karnataka Kannada
Sunday, May 05 2024
ಮಹಾರಾಷ್ಟ್ರ

ತೆಲುಗು ನಟಿ ಕಾವ್ಯಾ ತಾಪರ್ ಮುಂಬೈನಲ್ಲಿ ಬಂಧನ

Kavya Tapar
Photo Credit :

ಮುಂಬೈ :ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಜುಹು ಏರಿಯಾದಲ್ಲಿ ಒಂದು ಕಾರಿಗೆ ಗುದ್ದಿದ್ದಲ್ಲದೆ ಒಬ್ಬ ಪಾದಾಚಾರಿಯನ್ನು ಗಾಯಗೊಳಿಸಿದ್ದ ತೆಲುಗು ತಮಿಳು ಸಿನಿಮಾಗಳಲ್ಲಿ ನಟಿಸಿರುವ ಯುವ ನಟಿ ಕಾವ್ಯಾ ತಾಪರ್ ಅನ್ನು ನಿನ್ನೆ ರಾತ್ರಿ ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯರ ದೂರಿನ ಆಧಾರದ ಮೇಲೆ ಸ್ಥಳಕ್ಕೆ ಬಂದ ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿದ್ದರು.ಮಹಿಳಾ ಪೊಲೀಸ್ ಒಬ್ಬರ ಕೊರಳು ಪಟ್ಟಿ ಹಿಡಿದು ಜಗಳ ಮಾಡಿದ ಕಾವ್ಯಾ ತಾಪರ್ ಮಹಿಳಾ ಪೊಲೀಸ್‌ ಮೇಲೆ ಹಲ್ಲೆಗೆ ಸಹ ಯತ್ನಿಸಿದ್ದಾರೆ. ಹಾಗಾಗಿ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಮದ್ಯ ಸೇವಿಸಿ ವಾಹನ ಚಲಾಯಿಸಿದ ಪ್ರಕರಣ, ಅಪಘಾತ ಮಾಡಿದ ಪ್ರಕರಣ, ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ, ಪೊಲೀಸ್ ಅಧಿಕಾರಿಗಳಿಗೆ ಕರ್ತವ್ಯ ಮಾಡಲು ಅಡ್ಡಿಪಡಿಸಿದ್ದು ಹೀಗೆ ಹಲವು ದೂರುಗಳನ್ನು ಕಾವ್ಯಾ ವಿರುದ್ಧ ದಾಖಲಿಸಲಾಗಿದೆ. ಸೆಕ್ಷನ್ 353, 504, 427 ಗಳನ್ನು ಕಾವ್ಯಾ ಮೇಲೆ ಹೂಡಲಾಗಿದೆ.

ಮುಂಬೈನವರೇ ಆಗಿರುವ ಕಾವ್ಯಾ ತಾಪರ್ ನಟಿಸಿರುವುದು ಮಾತ್ರ ತೆಲುಗು ಹಾಗೂ ಒಂದು ತಮಿಳು ಸಿನಿಮಾದಲ್ಲಿ. 2013 ರಲ್ಲಿ ‘ತತ್ಕಾಲ್’ ಹೆಸರಿನ ಕಿರು ಸಿನಿಮಾದ ಮೂಲಕ ನಟನೆ ಆರಂಭಿಸಿದ ಕಾವ್ಯಾ ಬಳಿಕ ತೆಲುಗಿನಲ್ಲಿ ‘ಈ ಮಾಯ ಪೇರೇಮಿಟೊ’, ತಮಿಳಿನಲ್ಲಿ ‘ಮಾರ್ಕೆಟ್ ರಾಜ ಎಂಬಿಬಿಎಸ್’, ತೆಲುಗಿನಲ್ಲಿ ‘ಒಕ ಮಿನಿ ಕಥಾ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ತಮಿಳಿನ ವಿಜಯ್ ಆಂಟೊನಿ ಎದುರು ಹೊಸ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು