News Karnataka Kannada
Sunday, May 05 2024
ಅಂಕಣ

ಬದಲಾವಣೆಯ ಕಾಲಘಟ್ಟದಲ್ಲಿ ಪುರುಷರ ಕೇಶ ವಿನ್ಯಾಸ

Gayathri
Photo Credit : IANS

ಸೌಂದರ್ಯ ಪ್ರೀಯರಿಗೆ ಕೇಶವಿನ್ಯಾಸ ಅಂದ್ರೆ ಅದೇನೋ ಒಂದು ರೀತಿಯ ಕ್ರೇಜ್. ಅದರಲ್ಲೂ ಇಂದು ಯುವ ಪೀಳಿಗೆ ಚಿತ್ರ – ವಿಚಿತ್ರವಾದಂತಹ ಕೇಶ ವಿನ್ಯಾಸ ಮಾಡಿಸಿಕೊಂಡು ಜನರ ಗಮನ ಸೆಳೆಯುತ್ತಾರೆ. ಕೇಶವಿನ್ಯಾಸಕ್ಕೆಂದೇ ಸಾವಿರಾರು ರೂಪಾಯಿ ಖರ್ಚು ಮಾಡುವವರು ಇದ್ದಾರೆ. ಅಷ್ಟರ ಮಟ್ಟಿಗೆ ಇಂದು ಯುವ ಜನತೆ ಕೇಶ ವಿನ್ಯಾಸದಲ್ಲಿ ಕ್ರೇಜ್ ತೋರಿಸುತ್ತಿದ್ದಾರೆ. ಫಂಕಿ ಸ್ಟೈಲ್, ಸ್ಪೈಕ್, ಕಾರ್ಪೋರೇಟ್, ಪಾಶ್ಚಾತ್ಯ, ಸಿನಿಮಾ ನಟರ ಹಾಗೂ ಕ್ರಿಕೆಟ್ ಆಟಗಾರರ ಕೇಶ ವಿನ್ಯಾಸದ ಶೈಲಿ ಟ್ರೆಂಡಿಂಗ್ ಆಗಿದ್ದು, ಯುವಕರು ಅಚ್ಚುಕಟ್ಟಾಗಿ ನಕಲು ಮಾಡಿ ಫಾಲೋ ಮಾಡುತ್ತಿದ್ದಾರೆ.

ಬದಲಾವಣೆಯ ಕಾಲಘಟ್ಟದಲ್ಲಿ ಇರುವ ನಾವು ಕಾಲಕ್ಕೆ ತಕ್ಕಂತೆ ನಮ್ಮ ಅಭಿರುಚಿಗಳನ್ನು ಬದಲಾಯಿಸಿಕೊಂಡಿದ್ದೇವೆ. ಈ ಬದಲಾವಣೆಯಿಂದ ಕೂದಲು ವಿನ್ಯಾಸ ಹೊರತಾಗಿ ಇಲ್ಲ. ಇಂದು ಯುವಕರು ಹೆಚ್ಚು ಆಕರ್ಷಿತರಾಗುವುದು ಸಿನಿಮಾ ಹೀರೋಗಳ ಕೇಶ ವಿನ್ಯಾಸಕ್ಕೆ. ಅದರಲ್ಲೂ ಪ್ರತಿಯೊಂದು ಸಿನಿಮಾಕ್ಕೂ ಹೊಸ ಹೊಸ ಕೇಶವಿನ್ಯಾಸದೊಂದಿಗೆ ಬರುವ ಕನ್ನಡ ಚಿತ್ರರಂಗದ ಆರಡಿ ಕಟೌಟು ಕಿಚ್ಚ ಸುದೀಪ್ ಅವರ ಕೇಶ ವಿನ್ಯಾಸಕ್ಕೆ ಅನೇಕ ಮಂದಿ ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆ ತಕ್ಕ ಉದಾಹರಣೆ ಎಂದರೆ ಕಿಚ್ಚ ಸುದೀಪ್ ಆವರ ಹೆಬ್ಬುಲಿ ಚಿತ್ರದ ಕೇಶ ವಿನ್ಯಾಸ. ಈ ಕೇಶವಿನ್ಯಾಸಕ್ಕೆ ಯುವಕರು ಮಾತ್ರ ಆಕರ್ಷಿತರಾಗದೆ ಯುವತಿಯರು ಹೆಬ್ಬುಲಿ ಚಿತ್ರದ ಹೇರ್ ಸ್ಟೈಲ್ ಮಾಡಿ ಮಿಂಚಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್, ರಿಯಲ್ ಸ್ಟಾರ್ ಉಪೆಂದ್ರ, ಮಾತ್ರವಲ್ಲದೆ ಇತರ ಸಿನಿಮಾರಂಗದ ಹೀರೋಗಳ ಕೇಶವಿನ್ಯಾವನ್ನು ಯುವಕರು ಫಾಲೋ ಮಾಡುತ್ತಾರೆ.

ಇಂದು ಕೇಶ ವಿನ್ಯಾಸದಲ್ಲಿ ಮಹಿಳೆಯರಿಗಿಂತಲೂ ಹೆಚ್ಚು ಪುರುಷರಿಗೆ ಆಸಕ್ತಿ, ಅದಕ್ಕೆ ತಕ್ಕಂತೆ ಪುರುಷರಿಗೂ ಕೇಶ ಶೈಲಿಗೆ ಅನೇಕ ಆಯ್ಕೆಗಳು ಬಂದಿವೆ. ಕ್ಲಾಸಿಕ್ ಲುಕ್ ಎಂಬ ಹೇರ್ ಸ್ಟೈಲ್ ಎಲ್ಲಾ ವಯಸ್ಸಿನವರಿಗೂ ಸೂಕ್ತ. ಮಕ್ಕಳಿಂದ ಹಿಡಿದು ವಯೋವೃದ್ಧರೂ ಈ ಕ್ಲಾಸಿಕ್ ಲುಕ್ ಹೇರ್ ಸ್ಟೈಲ್ ಅನ್ನು ಪ್ರಯೋಗಿಸಬಹುದು.

ಬ್ಲೋಜೌಟ್ ಲುಕ್ ಎಂಬ ಕೇಶವಿನ್ಯಾಸವನ್ನು ಅತೀ ಹೆಚ್ಚು ಯುವಕರು ಇಷ್ಟ ಪಡುತ್ತಾರೆ. ಬ್ಲೋಜೌಟ್ ಲುಕ್ ವಿನ್ಯಾಸದಲ್ಲಿ ಕೂದಲನ್ನು ಎರಡೂ ಕಿವಿಯ ಬದಿಗಳಲ್ಲಿ ಸಣ್ಣದಾಗಿ ಕತ್ತರಿಸಿರಿ ಮಧ್ಯಭಾಗದಲ್ಲಿ ಮಾತ್ರ ಉದಕ್ಕೆ ಬಿಡಲಾಗುತ್ತದೆ. ಇದು ಯುವಕರಿಗೆ ಆಕರ್ಷಕವಾಗಿ ಕಾಣುವ ಹೇರ್ ಸ್ಟೈಲ್ ಆಗಿದೆ. ಇನ್ನೂ ಬಲಿಷ್ಠ ಸದೃಢ ದೇಹವನ್ನು ಹೊಂದಿರುವವರಿಗೆ ಆರ್ಮಿ ಕಟ್ ಸೂಕ್ತ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು