ಮಧ್ಯಪ್ರದೇಶ: ರೇವಾ ಲ್ಲೆಯಲ್ಲಿ 34 ವರ್ಷದ ವ್ಯಕ್ತಿಯೊಬ್ಬನನ್ನು ಅರೆಬೆತ್ತಲೆ ಮಾಡಿ, ಆತನ ಮೇಲೆ ಹಲ್ಲೆ ನಡೆಸಿ ಬಾಯಿಯಿಂದ ಶೂ ಎತ್ತಿಕೊಳ್ಳುವಂತೆ ಒತ್ತಾಯಿಸಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೊ ವೈರಲ್ ಆದ ಬಳಿಕ ಪ್ರಮುಖ ಆರೋಪಿ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ವ್ಯಕ್ತಿಯೊಬ್ಬನ ಕೈಗಳನ್ನು ಬೆನ್ನಿನ ಹಿಂದೆ ಕಟ್ಟಿ ಆತನಿಗೆ ಹಿಂಸೆ ನೀಡುತ್ತಿರುವ ಈ ವಿಡಿಯೋ ಎರಡು ವರ್ಷಗಳಿಗಿಂತಲೂ ಹಳೆಯದು.
ಆ ವ್ಯಕ್ತಿ ಬಿಟ್ಟು ಬಿಡುವಂತೆ ಅಂಗಾಲಾಚುತ್ತಿರುವುದು ಇದರಲ್ಲಿ ಕಾಣಿಸುತ್ತದೆ. ಆಸ್ತಿ ವಿವಾದವೇ ಇದಕ್ಕೆ ಕಾರಣ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಡಿಯೊ ನೋಡಿದ ಮೇಲೆ ನಾವು ಪ್ರಮುಖ ಆರೋಪಿ ಜವಾಹರ್ ಸಿಂಗ್ (55), ಗೊಂಡ್ ಬುಡಕಟ್ಟಿನ ಸದಸ್ಯ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಿದ್ದೇವೆ. ಜವಾಹರ್ ಸಿಂಗ್ ಮತ್ತು ಇತರ ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಶನಿವಾರ ಎಫ್ಐಆರ್ ದಾಖಲಿಸಲಾಗಿದೆ ಎಂದು ರೇವಾ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸಿಂಗ್ ಗೆ ತಿಳಿಸಿದ್ದಾರೆ.