ಮಥುರಾ: ಉತ್ತರ ಪ್ರದೇಶ ಎಟಿಎಸ್ ಪೊಲೀಸರ ತಂಡ ಮಥುರಾದಲ್ಲಿ ರಹಸ್ಯ ಕಾರ್ಯಾಚರಣೆ ನಡೆಸಿ 40 ರೊಹಿಂಗ್ಯಾ ಮುಸ್ಲಿಮರನ್ನು ಬಂಧಿಸಿದೆ.
ಇವರೆಲ್ಲರೂ ಕುಟುಂಬ ಸಮೇತ ಕಾಲೋನಿಯಲ್ಲಿ ವಾಸವಿದ್ದು, ಬಾಡಿಗೆ ಪದ್ದತಿಯಲ್ಲಿ ಕೃಷಿ ಜಮೀನು ಮಾಡಿಕೊಂಡಿದ್ದರು. ಜುಲೈ 26 ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಥುರಾಗೆ ಭೇಟಿ ನೀಡುತ್ತಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಸ್ಥಳೀಯ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಟ್ಟು ಮೇಲ್ವಿಚಾರಣೆ ನಡೆಸಿದ್ದು. ಈ ವೇಳೆ ರೊಹಿಂಗ್ಯಾ ಮುಸ್ಲಿಮರು ಅಕ್ರಮವಾಗಿ ವಾಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಬಂಧಿತರನ್ನು ಜೈಂಟ್ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದ್ದು, ರೊಹಿಂಗ್ಯಾಗಳು ನಿವಾಸ, ಗುರುತಿನ ಕುರಿತು ಯಾವುದೇ ದಾಖಲೆಗಳನ್ನು ಹೊಂದಿಲ್ಲ. ಬಾಡಿಗೆ ಕೃಷಿಯೊಂದಿಗೆ, ಹೋಟೆಲ್ ವೇಸ್ಟ್ ಖರೀದಿಸಿ ಮಾರಾಟ ಮಾಡುವ ದಂಧೆಯನ್ನು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.