News Karnataka Kannada
Thursday, May 09 2024
ಮಧ್ಯ ಪ್ರದೇಶ

ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಹೆಣ್ಣು ಚೀತಾ ಸಾವು

cheetah death
Photo Credit : Twitter

ಮಧ್ಯಪ್ರದೇಶ: ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ನಿರಂತರವಾಗಿ ಚೀತಾಗಳು ಸಾವನ್ನಪ್ಪುತ್ತಿವೆ. ಆಫ್ರಿಕಾದಿಂದ ತಂದ ಕೆಲವು ಹೆಣ್ಣು ಚಿರತೆಗಳಲ್ಲಿ ಧಾತ್ರಿ ಕೂಡ ಒಂದು. ಅದು ಕೂಡ ಶವವಾಗಿ ಪತ್ತೆಯಾಗಿದೆ ಎಂದು ಬುಧವಾರ ಅಧಿಕೃತ ಪ್ರಕಟಣೆ ತಿಳಿಸಿದೆ. ಸಾವಿಗೆ ಕಾರಣ ತಿಳಿಯಲು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಸಾಕಿರುವ 14 ಚೀತಾಗಳು (7 ಗಂಡು, 6 ಹೆಣ್ಣು ಮತ್ತು ಒಂದು ಮರಿ) ಆರೋಗ್ಯವಾಗಿವೆ ಎಂದು ಹೇಳಿಕೆ ತಿಳಿಸಿದೆ. ಕುನೋ ವನ್ಯಜೀವಿ ವೈದ್ಯರ ತಂಡ ಮತ್ತು ನಮೀಬಿಯಾದ ತಜ್ಞರು ಚೀತಾಗಳ ಆರೋಗ್ಯವನ್ನು ನಿರಂತರವಾಗಿ ಪರೀಕ್ಷಿಸುತ್ತಿದ್ದಾರೆ.

ಕಳೆದ ಎರಡು ದಿನಗಳಿಂದ ಈ ಚೀತಾವಿರುವ ಸ್ಥಳ ಪತ್ತೆಯಾಗಿರಲಿಲ್ಲ, ಕುನೋದಲ್ಲಿ ಇಲ್ಲಿಯವರೆಗೆ 8 ಚೀತಾಗಳು ಸಾವನ್ನಪ್ಪಿವೆ. 14 ಚೀತಾಗಳು ಹಾಗೂ ಒಂದು ಮರಿ ಜೀವಂತವಾಗಿದ್ದು, ಅದರಲ್ಲಿ ಒಂದು ಚೀತಾ ನಿರ್ವಾ ಅರಣ್ಯದಲ್ಲಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು