News Karnataka Kannada
Sunday, May 12 2024
ದೇಶ

ಕುನೋ ರಾಷ್ಟ್ರೀಯ ಉದ್ಯಾನದಲ್ಲಿದ್ದ ಚೀತಾ ‘ತೇಜಸ್‌’ ಸಾವು

male cheetah died
Photo Credit : Twitter

ಭೋಪಾಲ್: ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನಕ್ಕೆ ಬಿಡಲಾಗಿದ್ದ ಚೀತಾಗಳ ಪೈಕಿ ‘ತೇಜಸ್‌’ ಹೆಸರಿನ ಮತ್ತೊಂದು ಗಂಡು ಚೀತಾ ಸಾವನ್ನಪ್ಪಿದ್ದು, 4 ತಿಂಗಳಲ್ಲಿ ಇದು 7ನೇ ಪ್ರಕರಣವಾಗಿದೆ.

ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಚಿರತೆಯ ಕತ್ತಿನ ಮೇಲ್ಭಾಗದಲ್ಲಿ ಗಾಯದ ಗುರುತುಗಳು ಕಂಡುಬಂದಿದೆ. ಇದನ್ನು ಗಮನಿಸಿದ ಮೇಲ್ವಿಚಾರಣಾ ತಂಡ ತಕ್ಷಣ ವೈದ್ಯರಿಗೆ ಮಾಹಿತಿ ನೀಡಿದೆ. ನಂತರ ವೈದ್ಯರು ಪ್ರಾಣಿಯನ್ನ ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ʻತೇಜಸ್‌ʼ ಮೃತಪಟ್ಟಿದೆ. ಕಳೇಬರವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಪ್ರಧಾನ ಅರಣ್ಯ ಸರಂಕ್ಷಣಾಧಿಕಾರಿ ಜೆ.ಎಸ್‌ ಚೌಹಾಣ್‌ ತಿಳಿಸಿದ್ದಾರೆ.

ಕಳೆದ ಮಾರ್ಚ್‌ 27ರಂದು ಸಾಶಾ ಹೆಸರಿನ ಹೆಣ್ಣು ಚೀತಾ ಕಿಡ್ನಿ ಸೋಂಕಿನಿಂದ ಸಾವನ್ನಪ್ಪಿತ್ತು, ಏಪ್ರಿಲ್‌ 23ರಂದು ಉದಯ್‌ ಹೆಸರಿನ ಗಂಡು ಚೀತಾ ಶ್ವಾಸಕೋಶದ ವೈಫಲ್ಯದಿಂದ, ಮೇ 9ರಂದು ದಕ್ಷಾ ಹೆಸರಿನ ಹೆಣ್ಣು ಚೀತಾ ಬೇಟೆಯಾಡುವ ವೇಳೆ ಗಾಯಗೊಂಡು ಮೃತಪಟ್ಟಿತ್ತು. ಆ ನಂತರ ವಿವಿಧ ಕಾರಣದಿಂದ ಮೂರು ಚೀತಾ ಮರಿಗಳು ಮೃತಪಟ್ಟಿದ್ದವು. ಇದೀಗ 7ನೇ ಚೀತಾ ಸಾವನ್ನಪ್ಪಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು